ಹೊಸ ಭೂಸುಧಾರಣೆ ಕಾಯ್ದೆ : ನಾವು ಅಧಿಕಾರಕ್ಕೆ ಬಂದ್ರೆ ಕಾಯ್ದೆ ವಾಪಾಸ್. ಕಾಯ್ದೆಯನ್ನು ಮೊದಲ ಸ್ಥಿತಿಗೆ ತರುತ್ತೇವೆ : ಸಿದ್ದರಾಮಯ್ಯ  -Vishwanews24

Featured, ರಾಜ್ಯ ನ್ಯೂಸ್

ಹೊಸ ಭೂಸುಧಾರಣೆ ಕಾಯ್ದೆ : ನಾವು ಅಧಿಕಾರಕ್ಕೆ ಬಂದ್ರೆ ಕಾಯ್ದೆ ವಾಪಾಸ್. ಕಾಯ್ದೆಯನ್ನು ಮೊದಲ ಸ್ಥಿತಿಗೆ ತರುತ್ತೇವೆ : ಸಿದ್ದರಾಮಯ್ಯ  -Vishwanews24

ಬೆಂಗಳೂರು : ನಾವು ಅಧಿಕಾರಕ್ಕೆ ಬಂದ್ರೆ ಕಾಯ್ದೆ ವಾಪಾಸ್. ಕಾಯ್ದೆಯನ್ನು ಮೊದಲ ಸ್ಥಿತಿಗೆ ತರುತ್ತೇವೆ. ಈ ಮಾತಿಗೆ ಬದ್ಧವಾಗಿದ್ದೇವೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ನಿಂದ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಫ್ರೀಡಂ ಪಾರ್ಕ್ ಬಳಿ ರೈತ ಮುಖಂಡರು ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ವಿರೋಧಿ ನಡೆಸುತ್ತಿರುವಂತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಾನು 3 ವರ್ಷಗಳ ಕಾಲ ರೈತಸಂಘಟನೆಯಲ್ಲಿ ಇದ್ದೆ. ನನಗೂ ರೈತರ ಬಗ್ಗೆ ಕಾಳಜಿಯಿದೆ. ಕೃಷಿ ಕುಟುಂಬದಿಂದಲೇ ಬಂದವನಾಗಿದ್ದೇನೆ. ನಿಮ್ಮ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಮಣ್ಣಿನ ಮಗ ಅಂತಾರೇ, ಸಿಎಂ ಯಡಿಯೂರಪ್ಪ ರೈತರ ಶಾಲುಧರಿಸಿ ಪ್ರಾಮಾಣ ವಚನ ಸ್ವೀಕರಿಸಿದ್ದಾರೆ. ಇಂತಹ ನಾಯಕರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಇವರಿಗೆಲ್ಲಾ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.