ಹೊಸ ವರ್ಷಕ್ಕೆ ಎಲ್‌ಪಿಜಿ ಗ್ರಾಹಕರಿಗೆ ಮೋದಿ ಸರಕಾರದಿಂದ ಸಿಹಿಸುದ್ದಿ ..

Featured, ರಾಷ್ಟ್ರ ನ್ಯೂಸ್

ನವದೆಹಲಿ: ದೇಶದ ಜನತೆ ಹೊಸ ವರ್ಷವನ್ನು ಬರಮಾಡಿಕೊಂಡರೆ ಈ ಮಧ್ಯೆ ಕೇಂದ್ರ ಸರ್ಕಾರ ದೇಶದ ಜನತೆಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ.ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 5.91 ರು.ಗಳ ಕಡಿತ ಮಾಡಿದ್ದು ಇದು ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಇದರೊಂದಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ 494.99 ರುಪಾಯಿಗೆ ಸಿಗಲಿದೆ. ಇನ್ನು ಸಬ್ಸಿಡಿ ರಹಿತ ಎಲ್‌ಪಿಜಿ ದರ 120.50 ರುಪಾಯಿ ಕಡಿಮೆ ಮಾಡಲಾಗಿದ್ದು ಸದ್ಯದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 689 ರುಪಾಯಿ ಆಗಿದೆ. ಇದು ಚುನಾವಣಾ ತಂತ್ರಗಾರಿಕೆಯ ಆರಂಭ ಎಂದು ಗ್ರಹಿಸಲಾಗಿದೆ.

ಇನ್ನು ತಿಂಗಳ ಹಿಂದೆಯಷ್ಟೇ ಅಡುಗೆ ಅನಿಲದ ದರವನ್ನು ಕೇಂದ್ರ ಸರಕಾರ ಇಳಿಕೆಗೊಳಿಸಿತ್ತು. ಇದೀಗ ಮತ್ತೆ ಕಡಿತಗೊಳಿಸುವ ಮೂಲಕ ಸಿಹಿಸುದ್ದಿ ನೀಡಿದೆ..