ಹೋರಿ ಬೆದರಿಸುವ ಹಬ್ಬ : ಕೊಬ್ಬರಿ ಹೋರಿ ತಿವಿದು ಯುವಕ ಸಾವು ,12ಕ್ಕೂ ಅಧಿಕ ಮಂದಿಗೆ ಗಾಯ – Vishwanews24

Featured, ರಾಜ್ಯ ನ್ಯೂಸ್

 ಹೋರಿ ಬೆದರಿಸುವ ಹಬ್ಬ : ಕೊಬ್ಬರಿ ಹೋರಿ ತಿವಿದು ಯುವಕ ಸಾವು ,12ಕ್ಕೂ ಅಧಿಕ ಮಂದಿಗೆ ಗಾಯ

ಹಾವೇರಿ: ಇಲ್ಲಿನ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದಲ್ಲಿ ಕೊಬ್ಬರಿ ಹೋರಿ ತಿವಿದು ಯುವಕನೊಬ್ಬ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ನಡೆದಿದೆ.

ಹೋರಿ ಬೆದರಿಸುವ ಹಬ್ಬ ನೋಡಲು ಹೋಗಿದ್ದ ಮಂಜುನಾಥ್ ಸಂಗೂರು ಗ್ರಾಮದ ನಿವಾಸಿ ಮಂಜುನಾಥ್ ಚಳ್ಳಕ್ಕನವರ (27) ಮೃತ ದುರ್ದೈವಿಯಾಗಿದ್ದಾನೆ. ಹೊಟ್ಟೆಯ ಎಡಭಾಗಕ್ಕೆ ರಭಸವಾಗಿ ಹೋರಿ ತಿವಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುವಕನ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Hori Habba | ಹೋರಿ ಬೆದರಿಸುವ ಹಬ್ಬ; ಕೊಬ್ಬರಿ ಹೋರಿ ತಿವಿದು ಯುವಕ ಸಾವು - ವಿಸ್ತಾರ  ನ್ಯೂಸ್

ಘಟನೆಯಲ್ಲಿ 12 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಗಿನೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದಲ್ಲಿ ಚರ್ಮಗಂಟು ರೋಗ ಹೆಚ್ಚಳ : ʼಘಾಟಿ ಸುಬ್ರಹ್ಮಣ್ಯ ದೇವಾಲಯದ ರಾಸುʼಗಳ ಜಾತ್ರೆ ರದ್ದು – Vishwanews24

Leave a Reply