₹ 59 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಣಿಪಾಲ ಪೆರಂಪಳ್ಳಿ ರಸ್ತೆ ಉದ್ಘಾಟಿಸಿದ ಶಾಸಕ ಯಶ್ಪಾಲ್ ಸುವರ್ಣ – vishwanews24

Featured, ಉಡುಪಿ

₹ 59 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಣಿಪಾಲ ಪೆರಂಪಳ್ಳಿ ರಸ್ತೆ ಉದ್ಘಾಟಿಸಿದ ಶಾಸಕ ಯಶ್ಪಾಲ್ ಸುವರ್ಣ

ಮಣಿಪಾಲ: ಅಂಬಾಗಿಲು ಮಣಿಪಾಲ ಮುಖ್ಯರಸ್ತೆ ಪೆರಂಪಳ್ಳಿ ಸಾಯಿರಾಧ ಗ್ರೀನ್ ವ್ಯಾಲಿ ಬಳಿ 59 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ರಸ್ತೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ನಿರ್ವಹಣೆ ಇಲ್ಲದೆ ಸಂಪೂರ್ಣ ಹದಗೆಟ್ಟಿದ್ದ ರಸ್ತೆಯಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಉಡುಪಿ ಕ್ಷೇತ್ರಕ್ಕೆ ಮಂಜೂರಾದ ಲೋಕೋಪಯೋಗಿ ಇಲಾಖೆ ಅನುದಾನವನ್ನು ಈ ರಸ್ತೆಗೆ ಮೀಸಲಿರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ನಗರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೆರಂಪಳ್ಳಿ ಫಾತಿಮಾ ಚರ್ಚ್ ಧರ್ಮ ಗುರುಗಳಾದ ವಿಶಾಲ್ ಲೋಬೊ ಮಾತನಾಡಿ ಪೆರಂಪಳ್ಳಿ ಭಾಗದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಣಿಪಾಲ ಅಂಬಾಗಿಲು ರಸ್ತೆಯ ಕಾಂಕ್ರಿಟೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಶಾಸಕರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೂಡು ಪೆರಂಪಳ್ಳಿ ವಾರ್ಡಿನ ನಗರಸಭಾ ಮಾಜಿ ಸದಸ್ಯರಾದ ಶ್ರೀಮತಿ ಅನಿಟಾ ಬೆಲಿಂಡ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಶ್ರೀಮತಿ ಸುಮಿತ್ರಾ ನಾಯಕ್, ಶ್ರೀ ಕಿರಣ್ ಕುಮಾರ್ ಬೈಲೂರು, ನಗರಸಭಾ ಮಾಜಿ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ, ಶ್ರೀ ಗಿರಿಧರ ಆಚಾರ್ಯ, ಶ್ರೀ ಮಂಜುನಾಥ ಮಣಿಪಾಲ, ಶ್ರೀ ಟಿ. ಜಿ. ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಮುಖಂಡರಾದ ಶ್ರೀ ವಾಸುದೇವ ಭಟ್ ಪೆರಂಪಳ್ಳಿ, ಪಕ್ಷದ ಪ್ರಮುಖರಾದ ಶ್ರೀ ಶಶಾಂಕ್ ಶಿವತ್ತಾಯ, ಶ್ರೀಮತಿ ಸುಮ ಆರ್, ಶ್ರೀ ಪ್ರಶಾಂತ್ ಭಟ್, ಶ್ರೀ ಡೆನ್ನಿಸ್ ಮಸ್ಕರೇನ್ಹಸ್, ಉಲ್ಲಾಸ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಶಂಕರ್ ಕುಲಾಲ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Leave a Reply