ಆಶಾ ಕಾರ್ಯಕರ್ತೆಯರಿಗೂ ಪಡಿತರ ಕಿಟ್ ನೀಡಿ ಸಹಕರಿಸಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್.: vishwanews24

Featured, ಉಡುಪಿ

ಆಶಾ ಕಾರ್ಯಕರ್ತೆಯರಿಗೂ ಪಡಿತರ ಕಿಟ್ ನೀಡಿ ಸಹಕರಿಸಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್.

ಕಾಪು: ಲಾಕ್ ಡೌನ್ ಸಮಯದಲ್ಲಿ ಕೊರೋನಾ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಕಾಪು ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ವಿತರಿಸುವ ಮೂಲಕ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸಹಕರಿಸಿದರು.

ಈ ಸಂಧರ್ಭ ಮಾತಾಡಿದ ಶಾಸಕರು” ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಸೇವೆ ನಿಜವಾಗಿಯೂ ಶ್ಲಾಘನೀಯ, ಗ್ರಾಮದ ಪ್ರತಿ ಮನೆಮನೆಗೆ ಭೇಟಿ ನೀಡುತ್ತಾ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ.ಹಾಗಾಗಿ ಅವರನ್ನು ಗೌರವಿಸಬೇಕು ಎಂದರು.