ಗಂಗಾಧರ ಸುವರ್ಣ ರ ವೈಯಕ್ತಿಕ ವತಿಯಿಂದ ಮೂಳೂರಿನ 50 ಕುಟುಂಬಗಳಿಗೆ ತಲಾ ಹತ್ತು ಕೇಜಿ ಅಕ್ಕಿ ವಿತರಣೆ. ವಿತರಣೆಗೆ ಕೈ ಜೋಡಿಸಿದ ಮೂಳೂರು ಸರ್ವೇಶ್ವರ ಫ್ರೆಂಡ್ಸ್ .

Featured, ಉಡುಪಿ

ಗಂಗಾಧರ ಸುವರ್ಣ ರ ವೈಯಕ್ತಿಕ ವತಿಯಿಂದ ಮೂಳೂರಿನ 50 ಕುಟುಂಬಗಳಿಗೆ ತಲಾ ಹತ್ತು ಕೇಜಿ ಅಕ್ಕಿ ವಿತರಣೆ. ವಿತರಣೆಗೆ ಕೈ ಜೋಡಿಸಿದ ಮೂಳೂರು ಸರ್ವೇಶ್ವರ ಫ್ರೆಂಡ್ಸ್ .

ಕಾಪು:ಮೂಳೂರು ಸರ್ವೇಶ್ವರ ಫ್ರೆಂಡ್ಸ್ ನ‌ ಸಹಕಾರದೊಂದಿಗೆ ಗಂಗಾಧರ ಸುವರ್ಣ ಮತ್ತು ಜಿಲ್ಲಾಪ‌ಂಚಾಯತ್ ಸದಸ್ಯೆ ಶಿಲ್ಪಾ ಜಿ‌ ಸುವರ್ಣ ಇವರ ವೈಯಕ್ತಿಕ ವತಿಯಿಂದ ಮೂಳೂರು ಭಾಗದ ಬಡಕುಟುಂಬಗಳಿಗೆ ತಲಾ ಹತ್ತು ಕೇಜಿಯಂತೆ ಅಕ್ಕಿ ವಿತರಿಸುವ ಕಾರ್ಯ ಗುರುವಾರ ನಡೆಯಿತು.

ಸುಮಾರು ಐವತ್ತು ಬಡ ಕುಟುಂಬಗಳಿಗೆ ಗಂಗಾಧರ ಸುವರ್ಣ ದಂಪತಿಗಳು ಈ ಸೇವೆಯನ್ನು ಮಾಡಿದರು.

ಈ ಸಂಧರ್ಭದಲ್ಲಿ ಕಾಪು ಶಾಸಕ‌ ಲಾಲಾಜಿ ಆರ್ ಮೆಂಡನ್, ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್,ಕಾಪು ಕಂದಾಯ ಅಧಿಕಾರಿ ರವಿಶಂಕರ್,ಬಿಜೆಪಿ ಕಾಪು‌ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮೂಳೂರು ಬಿಜೆಪಿ ಸ್ಥಾನಿಯಧ್ಯಕ್ಷ ಕಿಶೋರ್ , ವೀರಕೇಸರಿ ಶೆಟ್ಟಿ ಚಿತ್ತನ್,ಕಿರಣ್,ಸುದರ್ಶನ್ ಮಹೇಶ್ ಸಾಲಿಯಾನ್, ಮೊದಲಾದ ಸದಸ್ಯರು ಉಪಸ್ಥಿತರಿದ್ದರು.