ಇನ್ನು ಮುಂದೆ ಗೋವಾದ ಬೀಚ್ ಗಳಲ್ಲಿ ಮದ್ಯ ನಿಷಿದ್ಧ – Vishwanews24

Featured, ರಾಷ್ಟ್ರ ನ್ಯೂಸ್

ಪಣಜಿ: ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುವಂತಹ ಪ್ರವಾಸಿಗರ ನಡವಳಿಕೆಗೆ 2000 ರೂ. ದಂಡ ವಿಧಿಸಲು ಗೋವಾ ಸರ್ಕಾರ ನಿರ್ಧಾರ ಮಾಡಿದೆ.

ನಾಗರಿಕರು ಹಾಗೂ ಪ್ರವಾಸೋದ್ಯಮ ವಲಯದಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುರುವಾರ ಗೋವಾ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಗುಂಪುಗಳಲ್ಲಿ ಬರುವಂತಹ ಪ್ರವಾಸಿಗರು ನಿಯಮ ಉಲ್ಲಂಘಿಸಿದರೆ ಹತ್ತು ಸಾವಿರ ರೂ. ದಂಡ ಹೇರಲಾಗುತ್ತದೆ.

ಪ್ರವಾಸಿಗರು ಬೀಚ್ ಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಮದ್ಯದ ಬಾಟಲಿ ಕೊಂಡೊಯ್ಯುವುದು ಮತ್ತು ಮದ್ಯ ಸೇವನೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ತೆರೆದ ಪ್ರದೇಶಗಳಲ್ಲಿ ಅಡುಗೆ ಮಾಡುವುದಕ್ಕೂ ನಿಷಿದ್ಧ ಹೇರಲಾಗಿದೆ. ಇದಕ್ಕೆ 2000 ರೂ. ದಂಡ ಹೇರಲಾಗುತ್ತದೆ.