ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ !! ಇನ್ಮುಂದೆ `ಇನ್ ಕಮಿಂಗ್’ ಕರೆಗಳಿಗೆ ರಿಚಾರ್ಜ್ ಮಾಡಬೇಕು..- Vishwanews24
ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ಕಂಪನಿಗಳು ಬಿಗ್ ಶಾಕ್ ನೀಡಿದ್ದು, ದೀರ್ಘಾವಧಿಯ ವಾಲಿಡಿಟಿ ಮತ್ತು ಅನಿಯಮಿತ ಕರೆಗಳಿಂದ ಬಳಕೆದಾರರು ರಿಚಾರ್ಜ್ ಮಾಡುತ್ತಿಲ್ಲ. ಇದಕ್ಕಾಗಿ ತಿಂಗಳಿಗೆ ನಿರ್ಚಿಷ್ಟ ಮೊತ್ತವನ್ನು ರಿಚಾರ್ಜ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಕಂಪನಿಗಳು ಯೋಚಿಸಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್ ಟೆಲ್ ಟೆಲಿಕಾಂ ಕಂಪೆನಿಯ ಸಿಎಂಡಿ ಸುನೀಲ್ ಭಾರ್ತಿಮಿತ್ತಲ್ ಸೂಚನೆ ನೀಡಿದ್ದು, ಆರಂಭದಲ್ಲಿ ಪ್ರತಿ ತಿಂಗಳು ಇನ್ ಕಮಿಂಗ್ ಕರೆಗಳಿಗಗಿ 35 ರೂ. ರಿಚಾರ್ಜ್ ದರ ವಿಧಿಸಲಿದೆ ಎನ್ನಲಾಗಿದ್ದು, ಅಲ್ಲದೆ ಮುಂಬರುವ ದಿನಗಳಲ್ಲಿ ಇದನ್ನು 75 ರೂ.ಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದಾರೆ.
ಏರ್ ಟೆಲ್ ಕಂಪೆನಿಯ 2ಜಿ ಸಿಮ್ ಗಳು ಕಳೆದ ನವೆಂಬರ್ ನಲ್ಲಿ ಬಳಕೆದಾರರಿಗೆ ಕನಿಷ್ಠ ರಿಚಾರ್ಜ್ ನಿಯಮವನ್ನು ಜಾರಿಗೆ ತಂದಿತ್ತು. ಇದರ ಬೆನ್ನಲ್ಲೇ ವೋಡಾಫೋನ್ ಐಡಿಯಾ ಕೂಡ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿ ಕಡ್ಡಾಯ ರಿಚಾರ್ಜ್ ಪ್ಲಾನ್ ಅನ್ನು ಜಾರಿಗೊಳಿಸಿತ್ತು.
ಏರ್ ಟೇಲ್ ಮತ್ತು ವೋಡಾಫೋನ್, ಐಡಿಯಾ ಕಂಪೆನಿಗಳು ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ಗೆ ಕುರಿತು ಮನವಿ ಸಲ್ಲಿಸಿದ್ದು, ಟಾರಿಫ್ ಪ್ಲಾನ್ ಬದಲಿಸುವ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಆದರೆ ಟ್ರಾಯ್ ಕಡೆಯಿಂದ ಯಾವುದೇ ಅನುಮೋದನೆ ಸಿಕ್ಕಿಲ್ಲ. ಈ ಯೋಜನೆಗೆ ಅನುಮತಿ ಸಿಕ್ಕರೆ ಗ್ರಾಹಕರು ಇನ್ ಕಮಿಂಗ್ ಕರೆಗಳಿಗೆ ರಿಚಾರ್ಜ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ.
