ಉಜಿರೆ ಸೌಜನ್ಯ ಕೊಲೆ ಪ್ರಕರಣ : ಸಿಬಿಐ ಮರು ತನಿಖೆ ಅಗ್ರಹಿಸಿ ಸಲ್ಲಿಸಿದ ಅರ್ಜಿ ವಜಾ -Vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಉಜಿರೆ ಸೌಜನ್ಯ ಕೊಲೆ ಪ್ರಕರಣ : ಸಿಬಿಐ ಮರು ತನಿಖೆ ಅಗ್ರಹಿಸಿ ಸಲ್ಲಿಸಿದ ಅರ್ಜಿ ವಜಾ -Vishwanews24

ಬೆಂಗಳೂರು: 8 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೆಯ್ಯಲ್ಪಟ್ಟ ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ನೀಡದಿರಲು ಹೈಕೋರ್ಟು ನಿರ್ಧರಿಸಿದೆ. ಈಗಾಗಲೇ ಒಮ್ಮೆ ಸಿಬಿಐಯಿಂದ ತನಿಖೆ ನಡೆದು ದೋಷರೋಪಣ ಪಟ್ಟಿ ಸಲ್ಲಿಕೆಯಾಗಿರುವ ಈ ಪ್ರಕರಣದ ತನಿಖೆ ಸಮರ್ಪಕವಾಗಿ ಆಗಿಲ್ಲ , ಹಾಗಾಗಿ ಮತ್ತೊಮ್ಮೆ ತನಿಖೆ ನಡೆಸಬೇಕು ಎಂದು ಕೋರಿ ಸೌಜನ್ಯ ತಂದೆ ಚಂದಪ್ಪಗೌಡ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಆದೇಶ ಹೊರಡಿಸಿದೆ.

ಈಗಾಗಲೇ ಈ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಬಳಿಕ ಸಿಬಿಐ ತನಿಖೆ ನಡೆಸಿದೆ. ಸಂತೋಷ್‌ ರಾವ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಹ ಸಲ್ಲಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸಂತೋಷ್‌ ರಾವ್‌ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಸಿಬಿಐ ನಡೆಸಿರುವ ತನಿಖೆ ಸಮರ್ಪಕ ಮತ್ತು ನ್ಯಾಯಬದ್ಧವಾಗಿದೆ. ಹಾಗಾಗಿ ಮರು ತನಿಖೆಯ ಅಗತ್ಯವಿಲ್ಲ ಎಂದು ವಕೀಲರಾದ ಪಿ.ಪಿ ಹೆಗ್ಡೆಯವರು ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದರು . ಈ ವಾದವನ್ನು ಹೈ ಕೋರ್ಟು ಪುರಸ್ಕರಿಸಿತ್ತು. ಪಿ.ಪಿ ಹೆಗ್ಡೆಯವರು ಧರ್ಮಸ್ಥಳದ ನಿವಾಸಿಗಳಾದ ಧೀರಜ್‌ ಜೈನ್‌, ಉದಯ್‌ ಜೈನ್‌ ಹಾಗೂ ಮಲ್ಲಿಕ್‌ ಜೈನ್‌ ಪರವಾಗಿ ನ್ಯಾಯಲಯದಲ್ಲಿ ವಾದ ಮಂಡಿಸಿದರು.

ಜ.30ರಿಂದ ಮಣಿಪಾಲ-ಬೆಂಗಳೂರು ನಡುವೆ ವೋಲ್ವೋ ಸಾರಿಗೆ ಓಡಾಟ ಸೌಲಭ್ಯ ಆರಂಭ -Vishwanews24

ಸೌಜನ್ಯ ತಂದೆ ಚಂದಪ್ಪ ಗೌಡರವರು ಧೀರಜ್‌ ಜೈನ್‌, ಉದಯ್‌ ಜೈನ್‌ ಹಾಗೂ ಮಲ್ಲಿಕ್‌ ಜೈನ್‌ ಅವರನ್ನು ತನಿಖೆಗೊಳಪಡಿಸಿ ಮರು ತನಿಖೆ ನಡೆಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು . ಅವರ ಅರ್ಜಿಯನ್ನು ಮಾನ್ಯ ಮಾಡಿದ್ದ ಸಿಬಿಐ ವಿಶೇಷ ನ್ಯಾಯಲಯವೂ ಈ ಮೂವರನ್ನು ಆರೋಪಿಗಳನ್ನಾಗಿಸಿ ಸಮನ್ಸ್ ಜಾರಿ ಮಾಡಿತ್ತು.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ತಮ್ಮನ್ನು ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿ ಸಮನ್ಸ್‌ ಜಾರಿಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಧೀರಜ್‌ ಜೈನ್‌, ಉದಯ್‌ ಜೈನ್‌ ಹಾಗೂ ಮಲ್ಲಿಕ್‌ ಜೈನ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈ ಕೋರ್ಟು ಈ ಮೂವರ ವಿರುದ್ದ ಸಿಬಿಐ ನ್ಯಾಯಲಯ ಹೊರಡಿಸಿದ್ದ ಸಮನ್ಸ್ ನ್ನು ವಜಾ ಮಾಡಿತ್ತು ಮಾತ್ರವಲ್ಲದೇ , ಪ್ರಕರಣದ ಮರು ತನಿಖೆಯ ಅದೇಶವನ್ನು ತಿರಸ್ಕರಿಸಿತು.

ನೇರವಾಗಿ ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿರುವುದು ಸರಿಯಲ್ಲ. ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸುವ ಮೊದಲು ಅವರ ವಾದ ಆಲಿಸಿದ ಬಳಿಕ ತೀರ್ಮಾನಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈ ಕೋರ್ಟು ನಿರ್ದೇಶನ ನೀಡಿತು.

ಸುರತ್ಕಲ್ : ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ -Vishwanews24

ಅಲ್ಲದೇ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ, 2012ರ ಅ.9 ರಂದು ಕಾಣೆಯಾಗಿದ್ದಳು. ಆ ಕುರಿತು ಆಕೆಯ ತಂದೆ ಚಂದ್ರಪ್ಪಗೌಡ ಅದೇ ದಿನ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದರು. ಅ.10 ರಂದು ಸೌಜನ್ಯಾ ಶವ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಮೊದಲು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ಸಿಐಡಿಗೆ ತನಿಖೆಯನ್ನು ವರ್ಗಾಯಿಸಲಾಗಿತ್ತು.

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿಸಿ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ -Vishwanews24