ಉಡುಪಿಯಲ್ಲಿ “ಕೃಷ್ಣ” ಕೊಟ್ರೆ “ಪ್ರಸಾದ” ಇಲ್ಲಾಂದ್ರೆ “ಗೋವಿಂದ”..!!
ಉಡುಪಿಯಲ್ಲಿ “ಕೃಷ್ಣ” ಕೊಟ್ರೆ “ಪ್ರಸಾದ”
ಇಲ್ಲಾಂದ್ರೆ “ಗೋವಿಂದ”..!!
ಉಡುಪಿ: ಈಗಾಗಲೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಾರ್ಟಿ ಪಾರ್ಟ್ ಟೈಮ್ ಪೊಲಿಟಿಷಿಯನ್-ಫುಲ್ ಟೈಮ್ ಬ್ಯುಸಿನೆಸ್ ಮ್ಯಾನ್ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ ನೀಡುವ ಮುಖೇನ ಕಾಂಗ್ರೇಸ್ ಪಾರ್ಟಿ ಕಟ್ಟಲು ಬೆವರು ಸುರಿಸಿದ ಕಾರ್ಯಕರ್ತರ ಪಡೆಯನ್ನೇ ದೂರ ತಳ್ಳಿಹಾಕುವಲ್ಲಿ ಸಫಲವಾಗಿದೆ ಅದರಲ್ಲೂ ವಿಶೇಷವಾಗಿ ಸಂಘಟನಾ ಚತುರ ಬಡವರ ಪಾಲಿಗೆ ಕಾಮಧೇನು ಅನಿಸಿಕೊಂಡಿರುವ ಕೃಷ್ಣಾಮೂರ್ತಿ ಆಚಾರ್ಯಗೆ ಕಾಂಗ್ರೇಸ್ ಟಿಕೆಟ್ ನೀಡದೆ ಇರುವುದು ಅಪ್ಪಟ ಕಾಂಗ್ರೇಸ್ಸಿಗರ ನಿದ್ದೆಗಡಿಸಿದೆ ಇದರಿಂದಾಗಿ ಆಚಾರ್ಯ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸುವ ಮುಖೇನ ಕಾಂಗ್ರೇಸ್ ಹೈಕಾಮಂಡ್ಗೆ ತಕ್ಕಾ ಪಾಟ ಮಾಡಲು ಕಾಂಗ್ರೇಸ್ನ ಕಾರ್ಯಕರ್ತರೆ ಮುಂದಾಗಿದ್ದಾರೆAಬ ಸುದ್ದಿ ಹೊರಬಿದ್ದಿದೆ.
ಸದಾ ಕಾರ್ಯಕರ್ತರ ನಡುವಿರುವ ಆಚಾರ್ಯ ಅವರನ್ನು ಕಡೆಗಣಿಸಿ ಟಿಕೆಟ್ ನೀಡದೆ ಹೈಕಮಾಂಡ್ ಕುದುರೆ ವ್ಯಾಪರ ಕುದುರಿಸಿ ಉಡುಪಿಯ ಉದ್ಯಮಿಗೆ ಟಿಕೆಟ್ ನೀಡಿರುವ ಪರಿಣಾಮವಾಗಿ ಈ ಎಲ್ಲಾ ಬೆಳವಣಿಗೆಗಳು ನಡೆದಿದೆ ಎನ್ನಲಾಗುತ್ತಿದೆ.
ಕೃಷ್ಣಾ ಮೂರ್ತಿ ಆಚಾರ್ಯ ಈಗಾಗಲೇ ಪಕ್ಷೇತರನಾಗಿ ಕಣಕ್ಕಿಳಿಯಲು ಸಂಪೂರ್ನ ಸಿದ್ದತೆ ನಡೆಸಿದ್ದು ಪ್ರತಿದಿನ ಬೂತ್ ಸಭೆ ವಾರ್ಡ್ ಸಭೆಗಳು ನಡೆಯುತ್ತಿದೆ ಮಾತ್ರವಲ್ಲದೆ ಬೆಂಗಾವಲು ಪಡೆಯಾಗಿ ಸಾವಿರಾರು ಯುವಕ ಉಡುಪಿಗೆ “ಕೃಷ್ಣ” ಬೇಕೆಂದು ಪಟ್ಟು ಹಿಡಿದಿರುವುದು ಕೂಡ ಪ್ರಸಾದ್ ರಾಜ್ ಕಾಂಚನ್ ಗೆಲುವಿಗೆ ಮುಳುವಾಗಲಿದೆ.
ಉದ್ಯಮಿಯೊಬ್ಬನಿಗೆ ಟಿಕೆಟ್ ನೀಡಿದರೆ ಏನಾಗುತ್ತದೆಂಬುದನ್ನು ತೋರಿಸುವ ಅನಿವಾರ್ಯ ಮತ್ತು ಅಗತ್ಯತೆ ಕಾಂಗ್ರೇಸ್ ಕಾರ್ಯಕರ್ತರಿಗಿದೆ ಆ ಪರಿಣಾಮವಾಗಿ ಈ ನಿಲುವು ಎನ್ನುತ್ತಾರೆ ಮಾಜಿ ಕಾಂಗ್ರೆಸ್ಸ್ ನಾಯಕರೊಬ್ಬರು ಇದರಿಂದಾಗಿಯೇ ಕಾಂಗ್ರೇಸ್ ದಿನಾ ಹೋದಂತೆ ವರ್ಚಸ್ಸು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
