ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆಗಾಗಿ ಈ ಬಾರಿಯೂ ಅಷ್ಟಮಿಗೆ ವೇಷ ಧರಿಸಲು ಸಿದ್ಧತೆ ನಡೆಸುತ್ತಿದ್ದಾರೆ ರವಿ ಕಟಪಾಡಿ – Vishwanews24
ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆಗಾಗಿ ಈ
ಬಾರಿಯೂ ಅಷ್ಟಮಿಗೆ ವೇಷ ಧರಿಸಲು ಸಿದ್ಧತೆ ನಡೆಸುತ್ತಿದ್ದಾರೆ ರವಿ ಕಟಪಾಡಿ
ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ರವಿ ಕಟಪಾಡಿ ಈ ಬಾರಿಯೂ ಅಷ್ಟಮಿಗೆ ವೇಷ ಧರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಕಟಪಾಡಿ, ಕಳೆದ ಏಳು ವರ್ಷಗಳಿಂದ ವೇಷ ಧರಿಸಿ ಒಟ್ಟು 89.75 ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದು, ಈ ಹಣವನ್ನು ಈವರೆಗೆ ಒಟ್ಟು 66 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲಾಗಿದೆ. ಈ ಬಾರಿ 10 ಲಕ್ಷ ರೂ. ಹಣ ಸಂಗ್ರಹಿಸುವ ಮೂಲಕ ಒಟ್ಟು ಒಂದು ಕೋಟಿ ರೂ. ಗುರಿ ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.19 ಮತ್ತು 20ರಂದು ವೇಷ ಧರಿಸಲಾಗುವುದು. ಹೈದರಬಾದ್, ಮಂಗಳೂರು, ಮಡಿಕೇರಿ, ಕಟಪಾಡಿಯ ಒಟ್ಟು ಏಳು ಮಂದಿ ಕಲಾವಿದರು ವೇಷಕ್ಕಾಗಿ ಕಳೆದ ಒಂದು ತಿಂಗಳುಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ.

ನಾಳೆಯಿಂದ ವೇಷ ಹಾಕುವ ಪ್ರಕ್ರಿಯೆ ನಡೆಯಲಿದೆ. ವೇಷ ಧರಿಸಿ ಉಡುಪಿ, ಮಲ್ಪೆ, ಕಟಪಾಡಿ, ಉದ್ಯಾವರಗಳಿಗೆ ತೆರಳಿ ಸಾರ್ವ ಜನಿಕರಿಂದ ಹಣ ಸಂಗ್ರಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
![]()
ಸಂಗ್ರಹವಾದ ಹಣವನ್ನು ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಮತ್ತು ಕೊರಗಜ್ಜ ಸನ್ನಿಧಾನದಲ್ಲಿ ಅನಾರೋಗ್ಯ ಪೀಡಿತ ಕುಂದಾಪುರ, ಕಾರ್ಕಳ, ಮುಲ್ಕಿ, ಹೆಬ್ರಿ, ಕಟಪಾಡಿ, ಕಾಪುವಿನ ಒಟ್ಟು ಆರು ಮಕ್ಕಳ ಚಿಕಿತ್ಸೆಗೆ ನೀಡಲಾ ಗುವುದು.
ನಮ್ಮ ಸೇವೆಗೆ ಧನ ಸಹಾಯ ಮಾಡಲಿಚ್ಛಿಸುವವರು ಪಾಂಗಾಳ ಬ್ಯಾಂಕ್ ಆಫ್ ಬರೋಡ, ಎಸ್ಬಿ ಖಾತೆ ಸಂಖ್ಯೆ: 84350100001040ಗೆ ಜಮಾ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡದ ಪ್ರಮುಖರಾದ ಮಹೇಶ್ ಶೆಣೈ, ಅರುಣ್, ಚರಣ್ ಉಪಸ್ಥಿತರಿದ್ದರು.
ರಾಜ್ಯದಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದ ರಾಜ್ಯ ಸರ್ಕಾರ – Vishwanews24
