ಮೀನು ಪ್ರಿಯರಿಗೆ ನೆಚ್ಚಿನ ಖಾದ್ಯಗಳನ್ನು ಸವಿಯುವ ಸಿಹಿಸುದ್ದಿ : ರಾಜ್ಯದಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದ ರಾಜ್ಯ ಸರ್ಕಾರ – Vishwanews24
ಮೀನು ಪ್ರಿಯರಿಗೆ ನೆಚ್ಚಿನ ಖಾದ್ಯಗಳನ್ನು ಸವಿಯುವ ಸಿಹಿಸುದ್ದಿ – ರಾಜ್ಯದಾದ್ಯಂತ ಮೀನೂಟ
ಮನೆ ಆರಂಭಿಸಲು ನಿರ್ಧರಿಸಿದ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಮೀನು ಪ್ರಿಯರಿಗೆ ನೆಚ್ಚಿನ ಖಾದ್ಯಗಳನ್ನು ಸವಿಯುವ ಸಿಹಿಸುದ್ದಿ ನೀಡಿದೆ.
ವಿಧಾನ ಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ, ಬೆಂಗಳೂರಿನಲ್ಲಿ ಐದು ಕಡೆ ಮೀನೂಟದ ಮನೆಗಳನ್ನು ಆರಂಭಿಸಲಾಗುವುದು. ಈ ಹಿಂದೆ ಇದನ್ನು ಸ್ಥಾಪಿಸಲಾಗಿದೆಯಾದರೂ ಹಣಕಾಸಿನ ಕೊರತೆಯ ಹಿನ್ನಲೆಯಲ್ಲಿ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಇಲಾಖೆಯೇ ಮೀನಿನ ಹೋಟೆಲ್ ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು,ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ
