ಉಡುಪಿ : ನೇಜಾರು ತಾಯಿ, ಮಕ್ಕಳ ಹತ್ಯೆ ಪ್ರಕರಣ : ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕ – vishwanews24

Featured, ಉಡುಪಿ

ಉಡುಪಿ : ನೇಜಾರು ತಾಯಿ, ಮಕ್ಕಳ ಹತ್ಯೆ ಪ್ರಕರಣ : ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕ

ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಾದಿಸಲು ಮಂಗಳೂರಿನ ಹಿರಿಯ ನ್ಯಾಯವಾದಿ ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಈ ಪ್ರಕಣದಲ್ಲಿ ಸಂಬಂಧಪಟ್ಟ ವಿಚರಣಾ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಲ್ಲಿ ಸರಕಾರದ ಪರವಾಗಿ ಹಾಜರಾ ಗಲು ಮತ್ತು ಪ್ರಕರಣವನ್ನು ನಡೆಸಲು ಆಳ್ವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ಮುಂದಿನ ಆದೇಶದವರೆಗೆ ನಿಯೋ ಜಿಸಿದ್ದು, ಈ ಪ್ರಕರಣದ ವಿಚಾರಣೆ ದಿನಾಂಕಗಳಂದು ನ್ಯಾಯಾಲಯಗಳಲ್ಲಿ ಹಾಜರಿದ್ದು, ಪ್ರಕರಣವನ್ನು ನಡೆಸುವಂತೆ ಒಳಾಡಳಿತ ಇಲಾಖೆ(ಪೊಲೀಸ್ ಸೇವೆಗಳು-ಬಿ) ಸರಕಾರದ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಆದೇಶ ನೀಡಿದ್ದಾರೆ.

ಕುಂದಾಪುರ: ಬೈಕ್ ಕಳವು ಪ್ರಕರಣ- ಆರೋಪಿ ಬಂಧನ – vishwanews24

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ತೃಪ್ತಿ ಲೇಔಟ್ ಎಂಬಲ್ಲಿ 2023ರ ನ.12ರಂದು ನೂರು ಮುಹಮ್ಮದ್ ಎಂಬವರ ಪತ್ನಿ ಹಸೀನಾ ಹಾಗೂ ಅವರ ಪುತ್ರಿಯರಾದ ಅಫ್ನಾನ್ ಮತ್ತು ಅಯ್ನಾಝ್ ಹಾಗೂ ಪುತ್ರ ಆಸೀಮ್ ಎಂಬವರನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿ ಪ್ರವೀಣ್ ಚೌಗುಳೆ ಬರ್ಬರವಾಗಿ ಕೊಲೈಗಿದಿದ್ದನು. ಎರಡು ದಿನಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿ ಬೆಂಗಳೂರಿನ ಕಾರಾಗೃಹದಲ್ಲಿದ್ದಾನೆ.

ಉಡುಪಿ : ಕಿದಿಯೂರ್‌ ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ  ಜ.26 ರಿಂದ 31ರ ತನಕ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ – vishwanews24

Leave a Reply