ಉಡುಪಿ : ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ -vishwanews24
ಉಡುಪಿ ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ
ಉಡುಪಿ : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತೋಲೆಯಂತೆ ಪಿ.ಒ.ಪಿ ಮತ್ತು ರಾಸಾಯನಿಕ ಬಳಸಿದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ, ಬಳಕೆ ಮತ್ತು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಆದ್ದರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪಿ.ಒ.ಪಿ ಅಥವಾ ರಾಸಾಯನಿಕವನ್ನು ಬಳಸಿ ಗೌರಿ ಗಣೇಶ ವಿಗ್ರಹವನ್ನು ತಯಾರಿಸಿ, ಮಾರಾಟ ಮಾಡಬಾರದು ಹಾಗೂ ನಿಗಧಿಪಡಿಸಿದ ಸ್ಥಳಗಳಲ್ಲಿ ಸದ್ರಿ ವಿಗ್ರಹಗಳನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿಸರ್ಜಿಸಬೇಕು. ತಪ್ಪಿದ್ದಲ್ಲಿ ಪೌರಸಭೆಗಳ ಕಾಯ್ದೆ 1964 / ಇತರೇ ನಿಯಮ / ಕಾಯ್ದೆ ರೀತ್ಯಾ ಕ್ರಮವಹಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
