ಉಡುಪಿ: ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ಬಸ್ಸಿನಲ್ಲಿ ಬೆಂಕಿ ಅವಘಡ ; ತಪ್ಪಿದ ಭಾರೀ ಅನಾಹುತ – vishwanews24
ಉಡುಪಿ: ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ಬಸ್ಸಿನಲ್ಲಿ ಬೆಂಕಿ ಅವಘಡ ; ತಪ್ಪಿದ ಭಾರೀ ಅನಾಹುತ
ಉಡುಪಿ: ಉಡುಪಿ ಸಮೀಪದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂದೂರುಕಟ್ಟೆಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ ಶುಕ್ರವಾರ ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿದೆ.
ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸಿಬ್ಬಂದಿ ಸ್ಪಂದಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸೌಜನ್ಯ ಪ್ರಕರಣದ ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ – vishwanews24
ತಪ್ಪಿದ ಭಾರೀ ಅನಾಹುತ: ಉರಿಯುತ್ತಿದ್ದ ಬಸ್ಸಿನ ಪಕ್ಕದಲ್ಲೇ ಇನ್ನೂ ಎರಡು ಬಸ್ಸುಗಳು ಹಾಗೂ ಒಂದು ಟೆಂಪೋವನ್ನು ನಿಲ್ಲಿಸಲಾಗಿತ್ತು. ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದಿದ್ದರಿಂದ ಬೆಂಕಿ ಬೇರೆಡೆಗೆ ವ್ಯಾಪಿಸಿದ್ದರೆ ಭಾರೀ ಸ್ಫೋಟ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ದೊಡ್ಡ ಗಂಡಾಂತರ ತಪ್ಪಿದೆ.
ಬಸ್ ಮತ್ತು ಪೆಟ್ರೋಲ್ ಪಂಪ್ ಒಂದೇ ವ್ಯಕ್ತಿಯ ಒಡೆತನದ್ದಾಗಿದ್ದು, ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ SIT ರಚನೆ – vishwanews24
