ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ -vishwanews24
ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ
ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ ನೂತನ ವಜ್ರಾಭರಣ `ಆನಿಕಾ’ವನ್ನು ಸೋಮವಾರ ಅನಾವರಣಗೊಳಿಸಲಾಯಿತು.
ರೂಪದರ್ಶಿಗಳಾದ ಅನುಷಾ ಕರ್ಕೇರ ಹಾಗೂ ನಿಸರ್ಗ ಈ ವಿನೂತನ ವಜ್ರಾಭರಣ ಆನಿಕಾವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅನುಷಾ ಕರ್ಕೇರ, ಮಲಬಾರ್ ಗೋಲ್ದ್ ನಲ್ಲಿ ವಜ್ರಾಭರಣಗಳ ಸಂಗ್ರಹ ವೈವಿಧ್ಯಮಯ ಹಾಗೂ ಆಕರ್ಷಣೀಯವಾಗಿದೆ. ಇಲ್ಲಿನ ಸಿಬ್ಬಂದಿಗಳ ಸೇವೆ ಕೂಡ ಅತ್ಯುತ್ತಮವಾಗಿದೆ. ಸಾಮಾಜಿಕ ಕಾರ್ಯದಲ್ಲೂ ಈ ಸಂಸ್ಥೆ ತೊಡಗಿಸಿ ಕೊಂಡಿದ್ದು, ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.

ನಿಸರ್ಗ ಮಾತನಾಡಿ, ಕಳೆದ ೮-೧೦ವರ್ಷಗಳಿಂದ ಮಲಬಾರ್ ಗೋಲ್ಡ್ನ ಗ್ರಾಹಕನಾಗಿದ್ದೆನೆ. ನನಗೆ ಇಲ್ಲಿನ ಚಿನ್ನ ಹಾಗೂ ವಜ್ರಾಭರಣ ಗಳಲ್ಲಿ ಸಂತೃಪ್ತಿ ಇದೆ. ಈ ಹೊಸ ಉತ್ಪನ್ನ ವೈವಿಧ್ಯಮಯವಾಗಿದ್ದು, ತುಂಬಾ ಆಕರ್ಷಣೀಯವಾಗಿದೆ ಎಂದು ಹೇಳಿದರು.

ಸಿಬ್ಬಂದಿ ಹರೀಶ್ ಎಂ.ಜಿ. ಅನಿಕಾ ಬಗ್ಗೆ ಮಾಹಿತಿ ನೀಡಿ, ಈ ವಜ್ರಾಭರಣವು ನ್ಯಾಚುರಲ್ ಡೈಮಂಡ್ಸ್ ಆಗಿದ್ದು, ಇದರಲ್ಲಿ ವೈವಿಧ್ಯಮಯ ಡಿಸೈನ್ಗಳಿವೆ. ಸಾಕಷ್ಟು ಆಕರ್ಷಕ ರೀತಿಯ ಈ ವಜ್ರಾಭರಣವು ೧೫ಸಾವಿರ ರೂ.ನಿಂದ ೧೫ಲಕ್ಷರೂ.ವರಗೆ ಬೆಲೆಬಾಳುತ್ತದೆ. ಅನಿಕಾದ ವಿವಿಧ ವಜ್ರಾಭರಣಗಳ ಸಂಗ್ರಹವು ಮಲಬಾರ್ನಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ., ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
