ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ ಭೇಟಿ – vishwanews24
ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ
ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಮಠದ ವತಿಯಿಂದ ಅಣ್ಣಾಮಲೈ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ಅಣ್ಣಾಮಲೈ, ಬಳಿಕ ಶ್ರೀಮಠದ ಪ್ರಸಾದ ಸ್ವೀಕರಿಸಿದರು. ಈ ವೇಳೆ ಮಠದ ವತಿಯಿಂದ ಪ್ರಸಾದ ಹಾಗೂ ಕೃಷ್ಣದೇವರ ಭಾವಚಿತ್ರ ನೀಡಿ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ:
ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24
ಅಣ್ಣಾಮಲೈ ಅವರು ಈ ಹಿಂದೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅವರು ಮಠಕ್ಕೆ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಭೇಟಿಯಾಗಲು ಅನೇಕ ಅಭಿಮಾನಿಗಳು ಆಗಮಿಸಿದ್ದರು.
ಬಿಜೆಪಿಯನ್ನು ತೊರೆದು ‘ವೀ ದ ಲೀಡರ್ಸ್ ಮೂವ್ಮೆಂಟ್’ ಆರಂಭಿಸಿದ ಬಳಿಕ ಅಣ್ಣಾಮಲೈ ಉಡುಪಿಗೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಈ ಹಿಂದೆ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಇದನ್ನೂ ಓದಿ:
ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24
