ಉಡುಪಿ : ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ  ಶಿರ್ವ ಪಿಡಿಓರವರನ್ನು ತಕ್ಷಣ ಅಮಾನತುಗೊಳಿಸಿ  : ಕಾಪು ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಒತ್ತಾಯ – Vishwanews24

Featured, ಉಡುಪಿ

ಉಡುಪಿ : ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ  ಶಿರ್ವ ಪಿಡಿಓರವರನ್ನು ತಕ್ಷಣ ಅಮಾನತುಗೊಳಿಸಿ  : ಕಾಪು ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಒತ್ತಾಯ

ಉಡುಪಿ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟಿದ್ದಾರೆ ಅನ್ನೋ ನೆಪದಲ್ಲಿ, ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮನೆಯನ್ನು ಬಿಜೆಪಿಯವರ ಕುಮ್ಮಕ್ಕಿನಿಂದ ಶಿರ್ವ ಗ್ರಾಮಪಂಚಾಯತ್ ಪಿಡಿಓ ,ಕಾಪು ತಹಸಿಲ್ದಾರ್ ಆದೇಶದ ನೆಪವನ್ನು ಇಟ್ಟುಕೊಂಡು ಮನೆ ದ್ವಂಸಗೊಳಿಸಿದ್ದು, ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ತೆರಳಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ ಪಿಡಿಓ ರವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಕಾಪು ಯುವಕಾಂಗ್ರೆಸ್ ಒತ್ತಾಯಿಸಿದೆ.

ಉಡುಪಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂಗ ದಾನ: ಆರು ಮಂದಿಯ ಜೀವಕ್ಕೆ ಬೆಳಕು – VIshwanews24

ಈ ಮಧ್ಯೆ ಈ ವಿಚಾರದಲ್ಲಿ ಸೊರಕೆಯವರು ಮಾಧ್ಯಮ ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬಿಜೆಪಿ ಗೂಂಡಾಗಳು, ಘೋಷಣೆ ಕೂಗುತ್ತಾ, ಸೊರಕೆಯವರ ಮಾತಿಗೆ ಅಡ್ಡಿಪಡಿಸಿದ್ದು, ಬಡಕುಟುಂಬದ ಮನೆಯನ್ನು ದ್ವಂಸಗೊಳಿಸುವಲ್ಲಿ ಬಿಜೆಪಿಯ ಕೈವಾಡ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಶಿರ್ವ ಪಿಡಿಓ ಜೊತೆ ಸೇರಿ ಯಾವುದೇ ನೋಟಿಸ್ ನೀಡದೆ ಮನೆಯನ್ನು ದ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ ಆ ಕುಟುಂಬ ಮನೆ ಇಲ್ಲದೆ ಈಗ ಬೀದಿಪಾಲಾಗಿದೆ. ಬಿಜೆಪಿ ಯವರಿಗೆ ನೈತಿಕತೆ ಇದ್ದರೆ ನೊಂದ ಮಹಿಳೆಯ ಕುಟುಂಬದ ಜೊತೆ ಇದ್ದು ಮನೆ ನಿರ್ಮಾಣ ಕಾರ್ಯದಲ್ಲಿ ನೈತಿಕ ಬೆಂಬಲ ಸೂಚಿಸಬೇಕು. ಕೂಡಲೇ ಆ ಬಡಕುಟುಂಬಕ್ಕೆ ಮನೆಯನ್ನು ಪಂಚಾಯ್ತಿ ವತಿಯಿಂದಲೇ ನಿರ್ಮಾಣ ಮಾಡಿಕೊಡಬೇಕು ಎಂದು ಕಾಪು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಒತ್ತಾಯಿಸಿದ್ದಾರೆ

ಇಂದು ಬಿಜೆಪಿ ಸಂಸ್ಥಾಪನಾ ದಿನ ; ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತು.. – Vishwanews24

Leave a Reply