ಉದಯ್‍ಪುರ ಪ್ರಕರಣ : ಏನಾದರೂ ಚಿಕ್ಕ ಘಟನೆ ನಡೆದರೂ ಬಿಜೆಪಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಹೇಳುತ್ತಾರೆ : ರಾಕೇಶ್ ಟಿಕಾಯತ್ – Vishwanews24
ಉದಯ್‍ಪುರ ಪ್ರಕರಣ : ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ : ರಾಕೇಶ್ ಟಿಕಾಯತ್ – Vishwanews24
ನವದೆಹಲಿ: ಉದಯ್‍ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯವಾಗಿದೆ. ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎನ್ನುವ ಮೂಲಕ ಹತ್ಯೆಯನ್ನು ರೈತ ನಾಯಕ ರಾಕೇಶ್ ಟಿಕಾಯತ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆಗಳು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಏಕೆ ನಡೆಯುತ್ತವೆ. ಹೀಗೆ ಏನಾದರೂ ಸಣ್ಣ ಘಟನೆ ಸಂಭವಿಸಿದರೂ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ ಎಂದು ಕಿಡಿಕಾರಿದರು.
ರಾಜಸ್ಥಾನ ಅಥವಾ ಪಂಜಾಬ್ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ಹೆಚ್ಚುತ್ತಿವೆ. ಇದು ಬಿಜೆಪಿಯ ಸಮಯವಾಗಿದೆ. ಕೇಂದ್ರದಲ್ಲಿ ಇರುವವರು ಇದೆಲ್ಲವನ್ನು ಮಾಡಿಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಅವರು, ಏನಾದರೂ ಚಿಕ್ಕ ಘಟನೆ ನಡೆದರೂ ಬಿಜೆಪಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಹೇಳುತ್ತಾರೆ ಎಂದು ಗುಡುಗಿದರು.
ಭಾರತದಲ್ಲಿ ಸಂವಿಧಾನ, ಕಾನೂನು ಮತ್ತು ಸೆಕ್ಷನ್‍ಗಳಿವೆ. ಆದರೆ ಅವೆಲ್ಲವೂ ಏನು ಮಾಡುತ್ತಿವೆ. ಇದರ ಬದಲು ಪಾಕಿಸ್ತಾನವನ್ನು ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದವರು ಏನು ಮಾಡಿದ್ದಾರೆ. ಈ ಕೊಲೆ ಮಾಡಿದವರನ್ನು ಕಾನೂನಿನ ನಿಯಮಾನುಸಾರ ಬಂಧಿಸಿ ಎಂದರು.
ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಸರ್ಕಾರ ರಚನೆ ಮಾಡೋದು ಗ್ಯಾರಂಟಿ : ಸಿದ್ದರಾಮಯ್ಯ – Vishwanews24
