ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ : ಠಾಕ್ರೆಗೆ ನಟಿ ಕಂಗನಾ – Vishwanews24

Featured, ರಾಷ್ಟ್ರ ನ್ಯೂಸ್

ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ : ಕಂಗನಾ ಹಳೆಯ ಟ್ವೀಟ್ ವೈರಲ್ 

ಮುಂಬೈ: ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಲು ಹೊರಟಿದ್ರಲ್ವಾ? ಈಗ ಗೊತ್ತಾಯ್ತಾ ಅದರ ತಾಕತ್ತು. ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ ಎಂದು ಉದ್ಧವ್​ ಠಾಕ್ರೆಗೆ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.

ನಟಿ ಕಂಗನಾ ರಣಾವತ್​ ಅವರ ಕಚೇರಿ ‘ಮಣಿಕರ್ಣಿಕಾ’ ಕಟ್ಟಡವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸೂಚನೆ ಮೇರೆಗೆ ಅಲ್ಲಿನ ಪಾಲಿಕೆ ಕಳೆದ ವರ್ಷ ನೆಲಸಮಗೊಳಿಸಿತ್ತು. ಈ ವೇಳೆ ಕಂಗನಾ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ ಎಂದು ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು.

ಇನ್ನು ಇದೀಗ ಠಾಕ್ರೆ ಅವರು ರಾಜೀನಾಮೆ ನೀಡಿರುವುದರ್‍ಇಂದ ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಉದಯ್‍ಪುರ ಪ್ರಕರಣ : ಏನಾದರೂ ಚಿಕ್ಕ ಘಟನೆ ನಡೆದರೂ ಬಿಜೆಪಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಹೇಳುತ್ತಾರೆ : ರಾಕೇಶ್ ಟಿಕಾಯತ್ – Vishwanews24

Leave a Reply