ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಸಲಾರ್‌ ಚಿತ್ರತಂಡ -vishwanews24

Featured, ದಕ್ಷಿಣ ಕನ್ನಡ

ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ʼಸಲಾರ್‌ʼ ಚಿತ್ರತಂಡ

ಮಂಗಳೂರು: ಪ್ಯಾನ್‌ ಇಂಡಿಯಾದಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ದೊಡ್ಡ ಹಿಟ್‌ ಆದ ʼಸಲಾರ್‌ʼ ಚಿತ್ರತಂಡ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದೆ.

ʼಬಾಹುಬಲಿʼ ಸಿನಿಮಾದ ಬಳಿಕ ಪ್ರಭಾಸ್‌ ಅವರು ಕಾಣಿಸಿಕೊಂಡ ಯಾವ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಿಲ್ಲ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಸಲಾರ್‌ʼ ಸಿನಿಮಾ ಪ್ರಭಾಸ್‌ ಅವರಿಗೆ ದೊಡ್ಡ ಹಿಟ್‌ ತಂದು ಕೊಟ್ಟಿದೆ. ಇದರ ಬೆನ್ನಲ್ಲೇ ಚಿತ್ರತಂಡ ದೇವಸ್ಥಾನಕ್ಕೆ ಭೇಟಿ ನೀಡಿದೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ʼಸಲಾರ್‌ʼ ತಂಡ ಭೇಟಿ ನೀಡಿದೆ. ಹೊಂಬಾಳೆ ಫಿಲ್ಮ್ಸ್‌ ನ ವಿಜಯ್ ಕಿರಗಂದೂರು, ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌ ನೀಲ್ ಹಾಗೂ ಇತರರು ಕಟೀಲು ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ

ಸದ್ಯ ʼಸಲಾರ್‌ʼ ತಂಡದ ಮಂಗಳೂರು ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ʼಸಲಾರ್‌ʼ ಸಿನಿಮಾದಲ್ಲಿ ಪ್ರಭಾಸ್‌, ಶ್ರುತಿ ಹಾಸನ್‌, ಪೃಥ್ವಿರಾಜ್‌ ಸುಕುಮಾರನ್‌ ಸೇರಿದಂತೆ ಹತ್ತಾರು ಕಲಾವಿದರು ನಟಿಸಿದ್ದಾರೆ

Leave a Reply