ಕಾಪುವಿನಲ್ಲಿ ಜೆಡಿಎಸ್ ಗೆ ಗ್ಲೂಕೋಸ್ ನೀಡಿದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.
ಕಾಪು: ರಾಷ್ಟ್ರೀಯ ಪಕ್ಷಗಳ ನಡುವೆ ಕರಾವಳಿ ಭಾಗದ ಕಾಪು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿ ಎಸ್ ನ್ನು ಮತ್ತೆ ಚಾರ್ಜ್ ಮಾಡಿದ ನಾಯಕ ಈ ಭಾರಿಯ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.
ಪಾದರಸದಂತೆ ಗ್ರಾಮಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿಯ ನೇತೃತ್ವದಲ್ಲಿ ನೂತನ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರ್ಪಡೆ ಕಾರ್ಯ ಜೋರಾಗಿಯೇ ನಡೆಯುತ್ತಿದೆ.
ಮೂಲತಹ ಕುಂದಾಪುರ ಮೂಲದವರಾದ ಮನ್ಸೂರ್ ಗೆ ಕಾಪುವಿನಲ್ಲಿ ನಿಕಟ ಸಂಬಂಧ ಹೊಂದಿದ್ದು ತನ್ನ ಕಾರ್ಯವ್ಯಾಪ್ತಿಯನ್ನ ಕ್ಷೇತ್ರದಾದ್ಯಂತ ವಿಸ್ತಾರಿಸಿ ಮತದಾರನ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಕಾಂಗ್ರೆಸ್ ನ ಆಡಳಿತ ನೋಡಿ ರೋಸಿ ಹೋಗಿದ್ದ ಜನತೆಗೆ ಮತ್ತೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆಯ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ಮನ್ಸೂರ್ ಬ್ಯೂಸಿ.
ಮಸೀದಿ, ಚರ್ಚ್, ದೇವಾಲಯ ಸೇರಿದಂತೆ ಸರ್ವಧರ್ಮ ಸಮನ್ವಯತೆಯನ್ನ ಕಾಪಾಡುವ ನಿಟ್ಟಿನಲ್ಲಿ ಮತ್ತು ಕರಾವಳಿ ಭಾಗದಲ್ಲಿ ವಿಶೇಷವಾಗಿ ಕಾಪುವಿನಲ್ಲಿ ಜೆಡಿಎಸ್ ನ ಖಾತೆ ತೆರೆಯುವ ಉತ್ಸಾಹದದಲ್ಲಿ ಮನ್ಸೂರ್ ಕಾರ್ಯ ಆರಂಭಿಸಿದ್ದಾರೆ.
ಎರಡು ದಿನದಲ್ಲಿ 200 ಕಾರ್ಯಕರ್ತರ ಸೇರ್ಪಡೆ
ಪಾದರಸದಂತೆ ಕಾಪುವಿನಲ್ಲಿ ಮಿಂಚಿನ ಸಂಚಾರ ನಡೆಸಿ ನಾಮಪತ್ರ ಸಲ್ಲಿಸಿ ಎರಡೇ ದಿನದಲ್ಲಿ ಸುಮಾರು 200 ಕ್ಕೂ ಹೆಚ್ಚು ವಿವಿಧ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೇ ಸೇರ್ಪಡೆಗೊಳಿಸಿ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುವಂತೆ ಬೆಂಬಲಿಸುತ್ತಿದ್ದು ಗೆಲುವಿನ ಹಾದಿಯನ್ನ ಮತ್ತಷ್ಟು ಸುಲಭಗೊಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ ಮನ್ಸೂರ್ ಇಬ್ರಾಹಿಮ್.
ಕಾಪು ಭಾಗದಲ್ಲಿ ಬಹಳಷ್ಟು ಪ್ರಕೃತಿ ದತ್ತವಾದ ಕೊಡುಗೆಗಳಿದ್ದರೂ ಅದನ್ನ ಸರಿಯಾಗಿ ವಿನಿಯೋಗಿಸಿಕೊಳ್ಳಲು ಇದುವರೆಗೆ ಶಾಸಕರಾದವರಿಗೆ ಸಾಧ್ಯವಾಗಿಲ್ಲ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಅಗತ್ಯವಿದೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಕಾರ್ಯ ಸಾಧ್ಯವಾಗಿಲ್ಲ ಮುಂದಿನ ದಿನದಲ್ಲಿ ಅದನ್ನ ನಾವು ಮಾಡಲು ಇಚ್ಛಿಸಿದ್ದು ಅದಕ್ಕೆ ಮತದಾರನ ಆಶಿರ್ವಾದ ಬೇಕಾಗಿದೆ ಅನ್ನುತ್ತಾರೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.
ಒಟ್ಟಾರೆ ಕಾಪುವಿನಲ್ಲಿ ರಾಷ್ಟ್ರೀಯ ಪಕ್ಷದ ನಡುವೇ ತೆನೆ ಹೊತ್ತ ಮಹಿಳೆಯ ಕಾರುಬಾರು ಹೇಗೆ ಸಫಲತೆ ನೀಡುತ್ತೆ ಎಂಬುದನ್ನ ಚುನಾವಣಾ ಫಲಿತಾಂಶ ಬರುವವರೆಗೆ ಕಾದು ನೋಡಬೇಕಾಗಿದೆ.
-

Vishwanews24 
Vishwanews24 
Vishwanews24 
Vishwanews24
