ಕಾಪುವಿನಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್

Featured, ಉಡುಪಿ
 ಕಾಪು :  ಕಾಪು ಕ್ಷೇತ್ರದ ಚುನಾವಣಾ ಕಾವು ಪಡೆಯುತ್ತಿದ್ದು ದಿನದಿಂದದಿನಕ್ಕೆ ಜೆಡಿಎಸ್ ಮತಬೇಟೆ ಕಾರ್ಯ ಜೋರಾಗಿಯೇ ನಡೆಯುತ್ತಿದೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಯುತ್ತಿದ್ದು ಇಲ್ಲಿನ ರಾಜಕೀಯದ ಹೊಸ ಇತಿಹಾಸ ಬರೆಯುವ ಚಿಂತನೆಯಲ್ಲಿದ್ದಾರೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್ , ಕ್ಷೇತ್ರದ ಪ್ರತಿಯೊಂದು ಮನೆಮನೆಗೆ, ಸಂಘಸಂಸ್ಥೆ,ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಮತಯಾಚನೇ ನಡೆಸುತ್ತಿದ್ದು ಜನರ ಸಮಸ್ಯೆಗಳಿಗೆ ಅಧಿಕಾರಕ್ಕೆ ಬಂದ ಕೂಡಲೆ ಪರಿಹಾರ ಒದಗಿಸುವ ಭರವಸೆ ನೀಡುತ್ತಿದ್ದಾರೆ.

ಕಾಪುವಿಗೆ ಉತ್ತಮ ದರ್ಜೆಯ ಸರ್ಕಾರಿ ಆಸ್ಪತ್ರೆ,ಎಂಜಿನಿಯರಿಂಗ್ ಕಾಲೇಜು,ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವಿಕೆ, ಪ್ರವಾಸೋಧ್ಯಮದ ಅಭಿವೃದ್ದಿಯ ಆದ್ಯತೆಯ ಬಗ್ಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ನಡೆಯಬೇಕಾದರೇ ಅದು ಜೆಡಿಎಸ್ ನಿಂದ ಮಾತ್ರ ಸಾಧ್ಯವಿದೆ ಅನ್ನುತ್ತಾರೆ ಇಬ್ರಾಹಿಮ್.

ಪ್ರತಿದಿನ ನೂರಾರು ವಿವಿಧ ಪಕ್ಷದ ಕಾರ್ಯಕರ್ತರನ್ನು ಜೆಡಿಎಸ್ ಗೆ ಸೇರ್ಪಡೆಗೊಳಿಸುವ ಕಾರ್ಯ ಕೂಡ ಜೋರಾಗಿಯೇ ನಡೆಯುತ್ತಿದ್ದು ಈ ಬಾರಿ ಕಾಪುವಿನಲ್ಲಿ ಜೆಡಿಎಸ್ ಗದ್ದುಗೆಯನ್ನೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ, ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಿಂದ ಬೇಸತ್ತ ಕಾಪುವಿನ ಮತದಾರರು ಜೆಡಿಎಸ್ ಪರ ನಿಂತಿರುವುದು ಕೂಡ ಇಬ್ರಾಹಿಮ್ ಗೆ ಅನುಕೂಲವಾಗಿ ಪರಿಣಮಿಸಿದೆ,
ಯೋಗಿಶ್ ಶೆಟ್ಟಿ ಮತ್ತು ಹುಸೇನ್ ಹೈಕಾಡಿ ಮತ್ತು ಪಕ್ಷದ ಹಿರಿಯರು ಫೀಲ್ಡ್ ಗೆ ಇಳಿದಿರುವುದರಿಂದ ಜೆಡಿಎಸ್ ನ ಮತಬ್ಯಾಂಕ್ ಮತ್ತಷ್ಟು ಗಟ್ಟಿಯಾಗಿದೆ ಅಂತನೇ ಹೇಳಬಹುದು.