ಕಾರ್ಕಳ: ಮಾಳ ಬಳಿ ಕ್ರೂಸರ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿ :  9 ಮಂದಿಗೆ ಗಾಯ – Vishwanews24

Featured, ಉಡುಪಿ

ಕಾರ್ಕಳ: ಮಾಳ ಬಳಿ ಕ್ರೂಸರ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿ :  9 ಮಂದಿಗೆ ಗಾಯ

ಕಾರ್ಕಳ : ಮಾಳ ಎಸ್.ಕೆ ಬಾರ್ಡರ್‌ನ ಓಟೆಹಳ್ಳಿ ಎಂಬಲ್ಲಿ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ ಹಲವು ಮಂದಿ ಗಾಯಗೊಂಡಿದ್ದಾರೆ.

ಶೃಂಗೇರಿಯಿಂದ ಮಾಳ ಕಡೆಗೆ ಬರುತ್ತಿದ್ದ ಕ್ರೂಸರ್ ಹಾಗೂ ಮಾಳ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಪರಿಣಾಮ ಕ್ರೂಸರ್ ಚಾಲಕ ಶ್ರೀಕಾಂತ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ತೀವ್ರತೆಗೆ ಎರಡು ವಾಹನಗಳು ಜಖಂಗೊಂಡಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು : ಮೇರಿ ಹಿಲ್ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ – Vishwanews24

Leave a Reply