ಕುಂದಾಪುರ: 2016 ರಲ್ಲಿ ಶಾಲಾ ಮಕ್ಕಳ ಬಲಿ ಪಡೆದ ಅಪಘಾತ ಪ್ರಕರಣ: 10 ವರ್ಷಗಳ ಬಳಿಕ ತೀರ್ಪು ಪ್ರಕಟ- vishwanews24

Featured, ಉಡುಪಿ

ಕುಂದಾಪುರ: ಶಾಲಾ ಮಕ್ಕಳ ಅಪಘಾತ ಪ್ರಕರಣ: ಬಸ್ ಚಾಲಕನಿಗೆ 1 ವರ್ಷ 17 ದಿನ ಜೈಲು

ಕುಂದಾಪುರ: ಎಂಟು ಶಾಲಾ ಮಕ್ಕಳ ಸಾವಿಗೆ ಕಾರಣವಾಗಿದ್ದ ಮೊವಾಡಿ ರಸ್ತೆ ಅಪಘಾತ ಪ್ರಕರಣಕ್ಕೆ 10 ವರ್ಷಗಳ ಬಳಿಕ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.

ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಡಾನ್ ಬಾಸ್ಕೋ ಶಾಲಾ ಕ್ರಾಸ್ ಬಳಿ 2016ರಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಆರೋಪಿ ಖಾಸಗಿ ಬಸ್ ಚಾಲಕ ಮಂಜುನಾಥ ತ್ರಾಸಿ ಅವರಿಗೆ 1 ವರ್ಷ 17 ದಿನಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 12,500 ರೂ. ದಂಡ ವಿಧಿಸಿ ಕುಂದಾಪುರದ ಮೂರನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು ಈ ತೀರ್ಪು ಪ್ರಕಟಿಸಿದ್ದಾರೆ.

ಡಿಕೆ ಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ  – vishwanews24

2016ರ ಜೂನ್ 21ರಂದು ಬೆಳಗ್ಗೆ 9.25ರ ಸುಮಾರಿಗೆ ಹೆಮ್ಮಾಡಿ ಕಡೆಯಿಂದ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರು ಮೊವಾಡಿ ಕ್ರಾಸ್ ಬಳಿ ಶಾಲಾ ರಸ್ತೆಯತ್ತ ತಿರುಗುತ್ತಿದ್ದಾಗ, ತ್ರಾಸಿ ಕಡೆಯಿಂದ ಕುಂದಾಪುರದತ್ತ ವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿತ್ತು ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.

ಅಪಘಾತದಲ್ಲಿ ಓಮ್ನಿಯಲ್ಲಿದ್ದ ಅನನ್ಯ ಡಿಸಿಲ್ವಾ, ನಿಖಿತ್ ಡಿಸಿಲ್ವಾ, ರಾಯಸ್ಟನ್ ಲೋಬೋ, ಕ್ಲೇರಿಸಾ, ಅನ್ಸಿಟಾ ಓಲೇವಿರಾ, ಆಲ್ವಿಟಾ ಓಲೇವಿರಾ, ಬೆಲ್ವಿನ್ ಡಯಾಸ್ ಹಾಗೂ ಕೆಲಿಸ್ಟಾ ಮೃತಪಟ್ಟಿದ್ದರು. ಇನ್ನು ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಉಡುಪಿ:  ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ರೈಲು ಸಂಚಾರ  – vishwanews24

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ವೃತ್ತ ನಿರೀಕ್ಷಕ ಸುದರ್ಶನ ಹಾಗೂ ನಂತರ ರಾಘವ ಎಸ್. ಪಡೀಲ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದ್ದರು.

Leave a Reply