ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೊಡೆತವನ್ನು ನೀಡಿದೆ : ರಾಹುಲ್ ಗಾಂಧಿ -Vishwanews24
ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಗುಲಾಮ್ ಅಹ್ಮದ್ ಮಿರ್ ಮತ್ತು ಹಿರಿಯ ನಾಯಕ ರವೀಂದ್ರ ಶರ್ಮಾ ಅವರ ಬಂಧನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರದ ಪಕ್ಷದ ಮುಖ್ಯಸ್ಥ ಗುಲಾಮ್ ಅಹ್ಮದ್ ಮಿರ್ ಮತ್ತು ವಕ್ತಾರ ರವೀಂದರ್ ಶರ್ಮಾ ಅವರ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಷ್ಟ್ರೀಯ ರಾಜಕೀಯ ಪಕ್ಷದ ವಿರುದ್ಧದ ಈ ಅಪ್ರಚೋದಿತ ಕ್ರಮದಿಂದಾಗಿ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೊಡೆತವನ್ನು ನೀಡಿದೆ. ಎಂದಿಗೆ ಈ ಹುಚ್ಚತನ ಕೊನೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಜಮ್ಮುಕಾಶ್ಮೀರದ ಕಾಂಗ್ರೆಸ್ ಘಟಕವು ಸುದ್ಧಿಗೋಷ್ಠಿಯನ್ನು ನಡೆಸುತ್ತಿದ್ದ ವೇಳೆ ದಿ ಢೀರ್ ಎಂಟ್ರಿ ಕೊಟ್ಟ ಪೊಲೀಸರು ಪಕ್ಷದ ಮುಖ್ಯ ವಕ್ತಾರ ಮತ್ತು ಮಾಜಿ ಎಂಎಲ್ ಸಿ ಶರ್ಮಾ ಅವರನ್ನು ಜಮ್ಮುವಿನ ಪಕ್ಷದ ಪ್ರಧಾನ ಕಚೇರಿಯಲ್ಲೇ ಬಂಧಿಸಿದ್ದರು.
I strongly condemn the arrest of our J&K PCC Chief, Shri Ghulam Ahmed Mir & spokesperson, Shri Ravinder Sharma in Jammu today. With this unprovoked action against a national political party, the Govt has delivered democracy another body blow. When will this madness end? https://t.co/1z3e7qHCDE
— Rahul Gandhi (@RahulGandhi) August 16, 2019
