ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ : ಇನ್ಸ್‌ಪೆಕ್ಟರ್ ಯಾವುದೇ ತಪ್ಪು ಮಾಡಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24
ಇನ್ಸ್‌ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ
ತಪ್ಪೇ ಮಾಡದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..
ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನಿರುತ್ತೇವಾ?
ಅನುಮತಿ ಪಡೆದುಕೊಂಡೇ ಮೆರವಣಿಗೆ ಹೋಗಬೇಕು..
ಮೈಸೂರು: ಜಿಲ್ಲೆಯ ಟಿ.ನರಸೀಪುರ ಇನ್ಸ್‌ಪೆಕ್ಟರ್ ಧಮ್ಕಿ ವಿಚಾರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೌನ ಮುರಿದಿದ್ದು, ಧನಂಜಯ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಸ್‌ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ. ಬುದ್ಧಿವಾದ ಹೇಳುವ ದಾಟಿ ಸ್ವಲ್ಪ ಬದಲಾಗಿದೆ ಅಷ್ಟೇ. ಅದನ್ನ ಬಿಟ್ಟು ಬೇರೆ ಯಾವುದೇ ತಪ್ಪು ಮಾಡಿಲ್ಲ. ತಪ್ಪೇ ಮಾಡದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ – vishwanews24
ಮಸೀದಿ ಮುಂದೆ ಯಾಕೆ ಪಟಾಕಿ ಹೊಡೆಯಬೇಕು? ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನಿರುತ್ತೇವಾ? ಚರ್ಚ್, ಮಸೀದಿ, ದೇವಸ್ಥಾನ ಮುಂದೆ ಪಟಾಕಿ ಹೊಡೆಯಬಹುದು ಅಂತ ಎಲ್ಲಿದೆ ಕಾನೂನು? ಯಾರೇ ತಪ್ಪು ಮಾಡಿದರೂ ತಪ್ಪೇ. ಈ ನಿಯಮ ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಅನುಮತಿ ಪಡೆದುಕೊಂಡೇ ಮೆರವಣಿಗೆ ಹೋಗಬೇಕು. ಯಾವ ರಸ್ತೆಗೆ ಬೇಕಾದರೂ ಹೋಗಲು ಅನುಮತಿ ಇಲ್ಲದೆ ಬಿಡಲು ಆಗಲ್ಲ. ಅನುಮತಿ ಪಡೆದುಕೊಂಡರೆ ಪೊಲೀಸರು ಭದ್ರತೆ ಮಾಡಿಕೊಡುತ್ತಾರೆ. ಅನುಮತಿ ಇಲ್ಲದೆ ಹೋಗಿ ಏನಾದರೂ ಹೆಚ್ಚು-ಕಡಿಮೆ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24
