ಚಂದ್ರಯಾನ-2 ಯಶಸ್ವಿ ಉಡಾವಣೆ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವಾಕಾಂಕ್ಷಿ ಮಿಷನ್​ ಚಂದ್ರಯಾನ-2 ಉಡಾವಣೆ ಕನಸು ಇಂದು ನೆರವೇರಿದ್ದು ಸರಿಯಾಗಿ 2.43 ನಿಮಿಷಕ್ಕೆ ಚಂದ್ರಯಾನ-2 ನೌಕೆಯನ್ನು ಹೊತ್ತ ಬಾಹುಬಲಿ ನಭಕ್ಕೆ ಚಿಮ್ಮಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್​ಎಲ್​ವಿ ಮಾರ್ಕ್​-111 ರಾಕೆಟ್​ ಮೂಲಕ ಚಂದ್ರಯಾನ-2 ಅನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.