ಭಾರತಕ್ಕೆ 5ನೇ ಬಂಗಾರ ಗೆದ್ದು ವಿನೂತನ ದಾಖಲೆ ನಿರ್ಮಿಸಿದ ಚಿನ್ನದ ಹುಡುಗಿ ಹಿಮಾ ದಾಸ್ -Vishwanews24
ನವದೆಹಲಿ: ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಗೆದ್ದು ಪದಕ ಪಡೆಯುವ ಮೂಲಕ 15 ದಿನಗಳಲ್ಲಿ ಹಿಮಾ ದಾಸ್ 5 ಚಿನ್ನದ ಪದಕೆ ಗೆದ್ದು ವಿನೂತನ ದಾಖಲೆ ನಿರ್ಮಿಸಿದ್ದಾರೆ.
ಝೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವಿಭಾಗದ 400 ಮೀ. ಓಟವನ್ನು ಹಿಮಾ ದಾಸ್ ಕೇವಲ 52.09 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದು ಈ ಆವೃತ್ತಿ (ಸೀಸನ್) ನ ಅತ್ಯುತ್ತಮ ಕಾಲಾವಧಿ ಎಂಬ ದಾಖಲೆಗೆ ಪಾತ್ರವಾಗಿದೆ.
ಜುಲೈ 2 ರಂದು ಪೋಲೆಂಡ್‌ನಲ್ಲಿ ನಡೆದಿದ್ದ ಪೋಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ ಕೂಟದ 200 ಮೀ. ಸ್ಪರ್ಧೆ ಯಲ್ಲಿ ಹಿಮಾ 23.65 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದಿದ್ದರು. ಬಳಿಕ ಜು.7 ರಂದು ಪೋಲೆಂಡ್‌ನಲ್ಲಿ ನಡೆದಿದ್ದ ಕುಟ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ ಹಿಮಾ ದಾಸ್ 23.97 ಸೆ.ಗಳಲ್ಲಿ ಗುರಿ ಯನ್ನು ಪೂರ್ಣಗೊಳಿಸಿ ಚಿನ್ನದ ಪದಕ ಜಯಿಸಿದ್ದರು.
ನಂತರ ಜು. 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದಿದ್ದ ಕ್ಲಾಡ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಸ್ಪರ್ಧೆ ಯಲ್ಲಿ 23.43 ಸೆ.ಗಳಲ್ಲಿ ಗುರಿ ಮುಟ್ಟಿ ಹಿಮಾ 3ನೇ ಚಿನ್ನ ಜಯಿಸಿದ್ದರು. ಜು.17 ರಂದು ಜೆಕ್ ಗಣರಾಜ್ಯ ದಲ್ಲಿ ನಡೆದಿದ್ದ ಟಬೂರ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ 23.25 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಇದು ಕೂಡ ಕೇವಲ 15 ದಿನಗಳಲ್ಲಿ 4 ಚಿನ್ನ ಗೆದ್ದ ಸಾಧನೆಯನ್ನು ಹಿಮಾ ಮಾಡಿದ್ದರು.
ಇದರಲ್ಲಿ ಹಿಮಾ ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ಸ್ ಕೂಟದಲ್ಲಿ 3 ಚಿನ್ನ, ಪೋಲೆಂಡ್‌ನಲ್ಲಿ 2 ಚಿನ್ನ ಗೆದ್ದಿದ್ದಾರೆ. ಈ ಋತುವಿನಲ್ಲಿ ಹಿಮಾ ದಾಸ್ 400 ಮೀ. ಓಟದಲ್ಲಿ ಮೊದಲ ಚಿನ್ನ ಗೆದ್ದಿದ್ದಾರೆ..

