ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸಿ ತಾಣ – ಇನ್ಮುಂದೆ ಖಾಸಗಿ ವಾಹನಗಳಿಗೆ ನಿರ್ಬಂಧ : ಜಿಲ್ಲಾಡಳಿತ – Vishwanews24

Featured, ರಾಜ್ಯ ನ್ಯೂಸ್

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸಿ ತಾಣ- ಖಾಸಗಿ ವಾಹನಗಳಿಗೆ ನಿರ್ಬಂಧ : ಜಿಲ್ಲಾಡಳಿತ

ಚಿಕ್ಕಮಗಳೂರು : ಮುಲ್ಲಯನಗಿರಿ ಕರ್ನಾಟಕ ಮತ್ತು ದಕ್ಷಿಣ ಭಾರತದ ಅತ್ಯುತ್ತಮ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿದೆ ವೀಕೆಂಡ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿಸರ್ಗ ಪ್ರೇಮಿಗಳಿಗೆ ಆಗಮಿಸುವ ಮೂಲಕ ಹಚ್ಚಹಸಿರಿನ ಒಡಲಿನಲ್ಲಿ ಕಾಲ ಕಳೆಯುವ ಮೂಲಕ ಎಂಜಾಯ್‌ ಮಾಡುತ್ತಾರೆ.

ಈ ನಿಟ್ಟಿನಲ್ಲಿ ವಾಹನಗಳ ದಟ್ಟನೆಯೂ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿ ಸೌಂದರ್ಯ ಅನುಭವಿಸಲು ಬರುವ ಪ್ರವಾಸಿಗರಿಗೆ ಹೊಸ ಶಾಕ್‌ ಎದುರಾಗಿದೆ.

ಕಾಪು : ಚಾಲಕನ ನಿಯಂತ್ರಣ ತಪ್ಪಿ ಗೂಡಂಗಡಿಗೆ ಡಿಕ್ಕಿ ಹೊಡೆದ ಲಾರಿ – Vishwanews24

ಈ ಬೆಟ್ಟಕ್ಕೆ ತೆರಳೋದಕ್ಕೆ ಕಿರಿದಾದ ರಸ್ತೆಗಳಿರೋದ್ರಿಂದ ವೀಕೆಂಡ್‌ನಲ್ಲಿ ಬರುವ ಜನರಿಗೆ ಟ್ರಾಫಿಕ್‌ ಕಿರಿಕಿರಿ ಹೆಚ್ಚಾಗುತ್ತಿದೆ. ಈ ಟ್ರಾಫಿಕ್‌ ತಪ್ಪಿಸೋದಕ್ಕೆ ಜಿಲ್ಲಾಡಳಿತ ಹೊಸ ಪ್ಲ್ಯಾನ್‌ಗೆ ಮುಂದಾಗಿದ್ದು, ಇನ್ಮುಂದೆ ಖಾಸಗಿ (ವೈಯಕ್ತಿಕ)ವಾಹನಗಳಿಗೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಬೇರೆ ಪ್ರವಾಸಿ ತಾಣಗಳ ಕಡೆಗಳಲಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಗಳನ್ನು ಮಾಡಲಾಗಿದೆ. ಆ ನಿಟ್ಟಿನಲ್ಲಿ ಮುಲ್ಲಯನಗಿರಿ ಬೆಟ್ಟಕ್ಕೂ ಇದೇ ರೀತಿ ಯೋಜನೆಗಳನ್ನು ತರಲು ಮುಂದಾಗಿದೆ.

ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು : ಪ್ರಿಯಾಂಕ ಗಾಂಧಿ  – Vishwanews24

ಖಾಸಗಿ ವಾಹನಗಳ ಭದ್ರತೆಯ ನಿಟ್ಟಿನಲ್ಲಿ ಬೆಟ್ಟದ ತಪ್ಪಲಿನಲ್ಲಿ ತೆರಳದಂತೆ ನಿರ್ಧಾರ ತೆಗೆದುಕೊಂಡಿದೆ. ಖಾಸಗಿ ವಾಹನಗಳ ಪಾರ್ಕಿಂಗ್‌ನನ್ನು ಅಲಂಪುರ ಬಳಿ ನಿಲ್ಲಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಚಿಕ್ಕಮಗಳೂರು ಉಪ ಆಯುಕ್ತ ಕೆ.ಎನ್‌ ರಮೇಶ್‌ ತಿಳಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Leave a Reply