ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್ ಶಾಕ್ : ಗೃಹಿಣಿ ಸಾವು – Vishwanews24
ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್ ಶಾಕ್ : ಗೃಹಿಣಿ ಸಾವು
ಕೊರಟಗೆರೆ: ಗೃಹಿಣಿಯೋರ್ವಳು ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ನ್ನು ಶುಚಿಗೊಳಿಸುತ್ತಿವ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸೂರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸೂರೇನಹಳ್ಳಿ ಗ್ರಾಮದ ನಿವಾಸಿ, ಮಂಗಳಮ್ಮ( 65) ಮೃತಪಟ್ಟ ದುರ್ದೈವಿ.
ಗೃಹಿಣಿ ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ನ್ನು ಶುಚಿಗೊಳಿಸುತ್ತಿರುವ ವೇಳೆ ವಿದ್ಯುತ್ ಶಾಕ್ ಹೊಡೆದು ಕೆಳಗೆಬಿದ್ದಿದ್ದಾರೆ. ಕೂಡಲೇ ಅವರನ್ನು ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ವೈದ್ಯಾಧಿಕಾರಿಗಳು ಪರೀಕ್ಷೆ ಮಾಡಿ ಮೃತಪಟ್ಟರುತ್ತಾರೆಂದು ಖಚಿತಪಡಿಸಿದ್ದಾರೆ. ಮಂಗಳಮ್ಮನ ಶವವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಉಡುಪಿ : ಮಳೆ ಹಾನಿ ; 500 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಸಿಎಂ – VIshwanews24
