ನನಗೆ ಯಾವ ಉತ್ಸವ ವೂ ಬೇಡ, ಪಕ್ಷದ ಉತ್ಸವ ನಡೆದರೆ ಸಾಕು : ಡಿ.ಕೆ. ಶಿ – Vishwanews24

ರಾಜ್ಯ ನ್ಯೂಸ್

ನನಗೆ ಯಾವ ಉತ್ಸವ ವೂ ಬೇಡ, ಪಕ್ಷದ ಉತ್ಸವ ನಡೆದರೆ ಸಾಕು : ಡಿ.ಕೆ. ಶಿ – Vishwanews24

ಬೆಂಗಳೂರು : ನನಗೆ ಯಾವ ಉತ್ಸವ ವೂ ಬೇಡ, ಪಕ್ಷದ ಉತ್ಸವ ನಡೆದರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿಕೆ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ,ನಾನು ಅಧಿಕಾರ ತೆಗೆದುಕೊಂಡ ದಿನವೇ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ನಡೆಯಲಿ ಎಂದು ಹೇಳಿದ್ದೇನೆ ಎಂದರು.

ಶಿವಕುಮಾರೋತ್ಸವ ನಡೆಯಲಿ ಎಂದು ಯಾರೋ ಅಭಿಮಾನಿಗಳು ಪತ್ರ ಬರೆದಿರಬಹುದು. ಆದರೆ ನನಗೆ ಬೇಡ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಲ್ಲಿ ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಇತರ ನಾಯಕರ ಉತ್ಸವಗಳನ್ನು ನಡೆಸಲು ಅಭಿಮಾನಿಗಳು ಮುಂದಾಗುತ್ತಿದ್ದು, ಡಿ.ಕೆ.ಶಿವಕುಮಾರ್ ಇದಕ್ಕೆ ತೀವ್ರ ವಿರೋಧ ವ್ಯಕತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್‌ ಶಾಕ್‌ : ಗೃಹಿಣಿ ಸಾವು – Vishwanews24

Leave a Reply