ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ : ರಿಷಬ್ ಶೆಟ್ಟಿ  – Vishwanews24

Featured, ರಾಜ್ಯ ನ್ಯೂಸ್

ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ : ರಿಷಬ್ ಶೆಟ್ಟಿ

ಕನ್ನಡದ `ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ವಿವಾದಕ್ಕೆ ಜಯ ಸಿಕ್ಕಿದೆ. ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಎಲ್ಲಾ ತಡೆಯಾಜ್ಞೆ ತೆರವುಗೊಳಿಸಲಾಗಿದೆ.

ಸಿನಿಮಾದಲ್ಲಿ ಹಾಡು ಬಳಸದಂತೆ ತಡೆಯಾಜ್ಞೆ ನೀಡಲಾಗಿತ್ತು. ಕೇರಳದ ಪಾಲಕ್ಕಾಡ್ ಕೋರ್ಟ್ ಕೂಡ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಇತ್ತ ಕೋಝಿಕ್ಕೋಡ್ ಕೋರ್ಟ್ ಆದೇಶಕ್ಕೆ ನೀಡಿದ್ದ ತಡೆಯನ್ನೂ ಕೇರಳ ಹೈಕೋರ್ಟ್ ತೆರವುಗೊಳಿಸಿದ್ದು, ಕೆಳಹಂತದ ನ್ಯಾಯಾಲಯದ ನಿಲುವನ್ನು ಎತ್ತಿ ಹಿಡಿದಿದೆ.

2023 ಹೊಸ ವರ್ಷಾಚರಣೆ: ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರ ನಿರ್ದೇಶನ – Vishwanews24

 

SHOCKING! Kantara Fame Rishab Shetty REFUSES To Work In Bollywood; Says,  'Kannada Cinema Is My Karmabhoomi,

`ಕಾಂತಾರ’ ಚಿತ್ರದ ವರಾಹ ರೂಪಂ ಹಾಡಿನ ಬಳಕೆಗೆ ಕೇರಳದ ಹೈಕೋರ್ಟ್ ಅನುಮತಿ ನೀಡಿದೆ. ಕೋಝಿಕ್ಕೋಡ್ ನ್ಯಾಯಲಯ ಕೂಡ ಈ ಹಿಂದೆ ತಡೆಯಾಜ್ಞೆ ತೆರವು ಮಾಡಿತ್ತು. ಇಂದು ಕೇರಳದ ಪಾಲಕ್ಕಾಡ್ ನ್ಯಾಯಲಯದಲ್ಲೂ ತಡೆಯಾಜ್ಞೆ ತೆರವು ಮಾಡಿದೆ. ಈ ಮೂಲಕ `ಕಾಂತಾರ’ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದರೊಂದಿಗೆ ‘ಕಾಂತಾರ ‘ಚಿತ್ರದ ‘ವರಾಹ ರೂಪಂ’ ಹಾಡಿಗೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿದೆ.‌

ಬೆಳ್ತಂಗಡಿ : ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು  – Vishwanews24

ಇದೀಗ ನಟ ರಿಷಬ್ ಶೆಟ್ಟಿ  ಸಂತಸ ವ್ಯಕ್ತಪಡಿಸಿದ್ದಾರೆ. “ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿನಲ್ಲಿ ಹಾಡು ಬದಲಾಯಿಸಲಿದ್ದೇವೆ” ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.

Leave a Reply