ಬೆಳ್ತಂಗಡಿ : ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು  – Vishwanews24

Featured, ದಕ್ಷಿಣ ಕನ್ನಡ

ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು 

ತಪ್ಪೋಪ್ಪಿಕೊಳ್ಳದೆ ಹೋದರೆ ದೈವದ ಮೊರೆ ಹೋಗುವ ಎಚ್ಚರಿಕೆ ನೀಡಿದ ಯಕ್ಷಗಾನ ಆಯೋಜಕರು

ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದಿರುವುದಾಗಿ ಯಕ್ಷಗಾನ ಆಯೋಜಕರು ಆರೋಪಿಸಿದ್ದಾರೆ.

ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಬುಧವಾರದಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು.

ಚಲಿಸುತ್ತಿದ್ದ ರೈಲಿನ ಕಿಟಕಿ ಮೂಲಕ ತೂರಿ ಬಂದ ಕಬ್ಬಿಣದ ರಾಡ್‌,  ಪ್ರಯಾಣಿಕ ಸಾವು​ – Vishwanews24

ಆದರೆ ಏಕ ಏಕಿ ನಿನ್ನೆ ರಾತ್ರಿ ಬ್ಯಾನರ್ ನ್ನು ಹರಿದು ಕಿತ್ತೆಸೆದ ಘಟನೆ ವರದಿಯಾಗಿದೆ.

ಪೊಸರಡ್ಕ ವಠಾರದಲ್ಲೂ ಗರಡಿಯಿದ್ದು ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಆದರೆ ಇದನ್ನು ಸಹಿಸಿದ ಕಿಡಿಗೇಡಿಗಳ ಗುಂಪು ಬ್ಯಾನರ್ ತೆರವುಗೊಳಿಸುವ ಮುನ್ನವೇ ಅದನ್ನು ಹರಿದು ಕ್ಷೇತ್ರಕ್ಕೆ ಅಪಮಾನವೇಸೆಗಿದ್ದಾರೆ. ಈ ವಿಕೃತಿ ಮೆರೆದವರು ಯಾರೆ ಇದ್ದರು ತಪ್ಪೋಪ್ಪಿಕೊಳ್ಳದೆ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.

ಕಾರ್ಕಳ : ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು – Vishwanews24

Leave a Reply