ದೇವಿಪ್ರಸಾದ್ ಶೆಟ್ಟಿ ಮನೆಗೆ ಚುನಾವಣಾಧಿಕಾರಿಗಳ ದಾಳಿ.

Featured, ಉಡುಪಿ

ಕಾಪು :  ಕೆಪಿಸಿಸಿ ಕಾರ್ಯದರ್ಶಿ ಐಕಲ ಬಾವ ದೇವಿಪ್ರಸಾದ್ ಶೆಟ್ಟಿ ಪಣಿಯೂರು ನ ಮನೆಗೆ ಇಂದು ಸಂಜೆ ಚುನಾವಣಾಧಿಕಾರಿಗಳು ದಾಳಿ‌ ನಡೆಸಿ ಬರಿಗೈಯಲ್ಲಿ ವಾಪಸ್ಸಾದ ಘಟನೆ ನಡೆದಿದೆ.

ಸುಮಾರು ಹತ್ತಕ್ಕೂ ಅಧಿಕ ಅಧಿಕಾರಿಗಳ ತಂಡ ದೇವಿಪ್ರಸಾದ್ ಮನೆಯನ್ನು ಸುತ್ತುವರಿದು ತಪಾಸಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ದೇವಿಪ್ರಸಾದ್ ವಿಶ್ವ ನ್ಯೂಸ್ 24 ಜತೆ ಮಾತನಾಡುತ್ತಾ
” ಇಂದು ಸಂಜೆ ದಿಢೀರನೆ ನನ್ನ ಪಣಿಯೂರು ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಆದ್ರೆ ನನ್ನ‌ ಮನೆಯಲ್ಲಿ‌ ದಾಳಿ ನಡೆಸುವಂತಹ ವಿಚಾರ ಇಲ್ಲ ಮತ್ತು ಬರಿಗೈಯಲ್ಲಿಯೇ ಅವರು ವಾಪಸ್ಸು ಹೋಗಿದ್ದಾರೆ, ಚುನಾವಣ ಸಮಯದಲ್ಲಿ ಇದೆಲ್ಲ ಮಾಮುಲು,ಈ ಘಟನೆಗೆ ಬಿಜೆಪಿಯವರ ಕುಮಕ್ಕು ಇರಬಹುದೆಂದು ನನಗೆ ಬಲವಾದ ಅನುಮಾನ ಮೂಡುತ್ತದೆ, ಒಟ್ಟಾರೆ ಯಾಗಿ ಇವರು ಏನು ಮಾಡಿದರು ಸಹ ವಿನಯ್ ಕುಮಾರ್ ಸೊರಕೆ ಗೆಲ್ಲುವವರೆಗೆ ವಿರಾಮಿಸುವ ಪ್ರಶ್ನೆಯೇ ಇಲ್ಲ ಎಂದರು”. 

                      ದೇವಿಪ್ರಸಾದ್ ಶೆಟ್ಟಿ ಬೆಳಪು
                       ಕೆ.ಪಿ.ಸಿ.ಸಿ ಕಾರ್ಯದರ್ಶಿ

2 comments

  • ಈ ಬಾರಿ ಗೆಲುವಿನ ಪತಾಕೆ ಹಾರಿಸುವುದು ಕಾಂಗ್ರೆಸ್ ಎಂಬುದು ಹೆಚ್ಚಾಗಿ ಕೇಳಿಬರುತ್ತಿದೆ…✌✌

Comments are closed.