ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

Featured, ರಾಜ್ಯ ನ್ಯೂಸ್

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರ ವನ್ನು ಹೆಚ್ಚಿಸಿದೆ. ಇಂದಿನಿಂದ ಈ ನೂತನ ದರ ಜಾರಿಯಾಗಿದ್ದು, ಇದರಿಂದ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ನಂದಿನಿ ತುಪ್ಪ ತುಪ್ಪದ ದರ ಲೀಟರ್ ವೊಂದಕ್ಕೆ 15 ರೂಪಾಯಿ ಮತ್ತು ಬೆಣ್ಣ ದರ ಕೆ.ಜಿ.ಗೆ 50 ರೂಪಾಯಿ ಏರಿಕೆ ಮಾಡಲಾಗಿದ್ದು, ಇಂದಿನಿಂದ ನೂತನ ದರ ಪಟ್ಟಿ ಜಾರಿಯಾಗಿದೆ. ಮಾರುಕಟ್ಟೆಯಲ್ಲಿ ನಂದಿನಿ ತುಪ್ಪದ ಬೆಲೆ ಲೀಟರ್ ವೊಂದಕ್ಕೆ 700 ರೂಪಾಯಿಯಿಂದ 715 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ ಬೆಣಅಣೆ ದರ ಕೆ.ಜಿಯೊಂದಕ್ಕೆ 610 ರೂಪಾಯಿಯಿಂದ 660 ರೂಪಾಯಿಗೆ ಏರಿಕೆಯಾಗಿದೆ.

ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯಕ್ಕೆ ಹೋದವರು ಈಗ ಧರ್ಮೋಪದೇಶ ನೀಡುತ್ತಿದ್ದಾರೆ : ಯೋಗಿ ಆದಿತ್ಯನಾಥ್‌ – vishwanews24

ಉತ್ಪಾದನಾ ವೆಚ್ಚ ಹೆಚ್ಚಳ, ಮಾರುಕಟ್ಟೆ ಪೈಪೋಟಿ, ಗ್ರಾಹಕರ ಬೇಡಿಕೆ ಆಧರಿಸಿ ನಂದಿನ ತುಪ್ಪ ಮತ್ತು ಬೆಣ್ಣೆಯ ದರ ಹೆಚ್ಚಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಮತ್ತು ಗ್ರಾಹಕರಿಗೂ ಅರ್ಥಿಕವಾಗಿ ಹೊರೆಯಾಗದಂತೆ ನಂದಿನಿ ತುಪ್ಪ ಮತ್ತು ಬೆಣ್ಣೆ ದರವನ್ನು ಪರಿಷ್ಕರಣೆ ಮಾಡಲಾಗಿದೆ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply