ನನ್ನ ಹುಟ್ಟುಹಬ್ಬ ಕಾರ್ಯಕ್ರಮದಿಂದ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ :  ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ನನ್ನ ಹುಟ್ಟುಹಬ್ಬ ಕಾರ್ಯಕ್ರಮದಿಂದ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ :  ಸಿದ್ದರಾಮಯ್ಯ

ಕಲಬುರಗಿ : ನನ್ನ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರು ಸೇರುತ್ತಾರೆ. ಹೀಗಾಗಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ನಾನೂ ಕೂಡ ಆ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದರು.

ನನ್ನ ಹುಟ್ಟುಹಬ್ಬ ಆಚರಿಸಿಕೊಂಡರೆ ಬಿಜೆಪಿಯವರಿಗೆ ಯಾಕೆ ಹೆದರಿಕೆ ನನ್ನ ಜನ್ಮದಿನದ ಕಾರ್ಯಕ್ರಮಕ್ಕೆ ನಮ್ಮವರಿಗೆ ಆತಂಕ ಇಲ್ಲ. ಬಿಜೆಪಿಯವರಿಗೆ ಹೆದರಿಕೆ ಶುರುವಾಗಿದೆ ಎಂದರು

ದೇವನೂರು ಮಹಾದೇವ ಅವರ ಆರ್.ಎಸ್‌ಎಸ್ ಆಳ ಮತ್ತು ಅಗಲ ಪುಸ್ತಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ದಾಖಲಾತಿ ಸಮೇತ ದೇವನೂರು ಮಹಾದೇವ ಅವರು ಪುಸ್ತಕ ಬರೆದಿದ್ದಾರೆ. ಸತ್ಯ ಹೇಳಿದ್ರೆ ಆರ್ ಎಸ್‌ಎಸ್ ನವರಿಗೆ ಕೋಪ ಬರುತ್ತದೆ ಎಂದು ಹೇಳಿದ್ದಾರೆ.

ಕಿಕ್​​​ ಬಾಕ್ಸಿಂಗ್ ಕಂಟಕ : ಎದುರಾಳಿ ಪಂಚ್​ಗೆ ​​ ಪ್ರಾಣ ಬಿಟ್ಟ ಯುವಕ – Vishwanews24

Leave a Reply