ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

Featured, ರಾಜ್ಯ ನ್ಯೂಸ್

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಆಗಸ್ಟ್​​ 03ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದೆ.

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಭಾರಿ ಅಸಮಾಧಾನ ಭುಗೆಲದ್ದಿದ್ದ ಹಿನ್ನೆಲೆ ಕಾಂಗ್ರೆಸ್​​ ಹೈಕಮಾಂಡ್​​, ಅಳೆದು ತೂಗಿ ನೂತನ ಸಚಿವರಿಗೆ ಜವಾಬ್ದಾರಿ ನೀಡಿದೆ. ನಾಳೆಯಿಂದ ಆಗಸ್ಟ್ 27ರವರೆಗೆ ವಿಧಾನಮಂಡಲ ಮುಂಗಾರು ಅಧಿವೇಶನ ನಿಗದಿಯಾಗಿದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯದರೋದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.

ಉಡುಪಿ:  ಆ.14 ರಂದು ನೇರ ಸಂದರ್ಶನ – vishwanews24

ಈ ನಡುವೆ ಅಧಿವೇಶನ ಆರಂಭದ ಮುನ್ನಾ ದಿನವೇ ನೂತನ ಸಚಿವರಿಗೆ ಇಲಾಖಾವಾರು ಜವಾಬ್ದಾರಿ ಹಂಚಿಕೆ ನಡೆದಿದೆ.

ಎನ್​.ಚಲುವರಾಯಸ್ವಾಮಿ-ಕೃಷಿ ಇಲಾಖೆ
ರಿಜ್ವಾನ್ ಅರ್ಷದ್-ಆಹಾರ & ನಾಗರಿಕ ಸರಬರಾಜು ವ್ಯವಹಾರ
ಕೆ.ಹೆಚ್​.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ
ಸಂತೋಷ್ ಲಾಡ್-ಕಾರ್ಮಿಕ ಇಲಾಖೆ
ಕೆ.ಎಸ್.ಬಸವಂತಪ್ಪ- ಮೀನುಗಾರಿಕೆ, ಬಂದರು ಮತ್ತು ಒಳನಾಡು
ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ
ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ ಇಲಾಖೆ
ಜಮೀರ್ ಅಹ್ಮದ್ ಖಾನ್​-ವಸತಿ ಇಲಾಖೆ
ಲಕ್ಷ್ಮಣ ಸವದಿ-ಸಹಕಾರ ಇಲಾಖೆ
ಡಾ.ಅಜಯ್​ ಸಿಂಗ್​-ಅರಣ್ಯ ಇಲಾಖೆ
ಎಸ್​.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂವಿಜ್ಞಾನ ಇಲಾಖೆ
ಹೆಚ್​.ಸಿ.ಬಾಲಕೃಷ್ಣ-ಸಣ್ಣ ನೀರಾವರಿ ಇಲಾಖೆ
ಪುಟ್ಟರಂಗ ಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಚಿವ ಮುನಿಯಪ್ಪ ಖಾತೆ ಬದಲಾವಣೆ

ಕಡಬ : ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪ್ರಕರಣ ದಾಖಲು – vishwanews24

ಸಚಿವ ಕೆ.ಹೆಚ್.ಮುನಿಯಪ್ಪ ಖಾತೆ ಬದಲಾವಣೆ ಮಾಡಲಾಗಿದ್ದು, ಸಮಾಜಕಲ್ಯಾಣ ಇಲಾಖೆಯ ಹೊಣೆ ನೀಡಲಾಗಿದ್ದೆ. ಈ ಹಿಂದೆ ಮುನಿಯಪ್ಪಗೆ ಆಹಾರ ಇಲಾಖೆ ನೀಡಲಾಗಿತ್ತು. ಈಗ ಆ ಖಾತೆಯನ್ನು ರಿಜ್ವಾನ್​​ ಅರ್ಷದ್​​ಗೆ ಹಂಚಿಕೆ ಮಾಡಲಾಗಿದೆ.

Leave a Reply