ಪಡುಬಿದ್ರಿ : ಎಕ್ಸ್ ಪ್ರೆಸ್ ಬಸ್ ಚಾಲಕ ಹಾರ್ನ್ ಹಾಕಿದ ಕಾರಣಕ್ಕೆ ಕಾರು ಚಾಲಕನಿಂದ ಹಲ್ಲೆ – Vishwanews24

Featured, ಉಡುಪಿ

ಪಡುಬಿದ್ರಿ : ಎಕ್ಸ್ ಪ್ರೆಸ್ ಬಸ್ ಚಾಲಕ ಹಾರ್ನ್ ಹಾಕಿದ ಕಾರಣಕ್ಕೆ ಕಾರು ಚಾಲಕನಿಂದ ಹಲ್ಲೆ

ಪಡುಬಿದ್ರಿ  :ಎಕ್ಸ್ ಪ್ರೆಸ್ ಬಸ್ ಚಾಲಕ ಹಾರ್ನ್ ಹಾಕಿದ ಕಾರಣಕ್ಕೆ ಕಾರು ಚಾಲಕ ಬಸ್ಸನ್ನು ತಡೆದು ಚಾಲಕನಿಗೆ ಹಲ್ಲೆಗೈದ ಘಟನೆ ಇಂದು ಬೆಳಗ್ಗೆ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ.

ಪಡುಬಿದ್ರಿ ನಿವಾಸಿ ಬಸ್ ಚಾಲಕ ಶೈಲು ಯಾನೆ ಶೈಲೇಶ್ ಘಟನೆಯಲ್ಲಿ ಮುಖದ ಭಾಗಕ್ಕೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳ್ಳಾಲ : ಇಬ್ಬರು ಮಕ್ಕಳ ತಂದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು.. Vishwanews24

ಮೂಲ್ಕಿ ಕೊಲ್ನಾಡ್ ಪರಿಸರದ ಯುವಕ ಕೃತ್ಯ ಎಸಗಿದವನು ಎಂದು ಹೇಳಲಾಗುತ್ತಿದೆ. ಮಾಸ್ಟರ್ ಹೆಸರಿನ ಎಕ್ಸ್ ಪ್ರೆಸ್ ಬಸ್ ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಎರ್ಮಾಳ್ ಸಮೀಪ ಕಾರ್ ಚಾಲಕನಿಗೆ ಸೈಡ್ ಕೊಡುವಂತೆ ಹಾರ್ನ್ ಹಾಕಿ ಓವರ್ ಟೇಕ್ ಮಾಡಿದ್ದ, ಬಳಿಕ ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಬಸ್ಸನ್ನು ತಡೆದು ಚಾಲಕ ಶೈಲು ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು: ಯುವಕ ನಾಪತ್ತೆ – Vishwanews24

Leave a Reply