ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ – vishwanews24

Featured, ಉಡುಪಿ

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್

ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಸ್ಥಳದಿಂದ 625 ಗ್ರಾಂ ಗಾಂಜಾ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಬಡಾ ಎರ್ಮಾಳು‌ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ.

ಮೂಡುಬಿದಿರೆ:  ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ; ನಿವೃತ್ತ ಶಿಕ್ಷಕ ಜಿ.ಕೆ ಭಟ್ ನಿಧನ – vishwanews24

ಗ್ರಾಹಕರಿಗೆ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ಪಾನ್ ಸ್ಟಾಲ್‌ನಿಂದ ಮಾರಾಟಕ್ಕಾಗಿ ಇಟ್ಟಿದ್ದ ಗಾಂಜಾ: ಒಟ್ಟು 625.83 ಗ್ರಾಂ ನಗದು: ₹600/- ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಉಡುಪಿ ಜಿಲ್ಲಾ SOCO ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾದಕ ವಸ್ತುವನ್ನು ಪರೀಕ್ಷಿಸಿ ತನಿಖೆಗೆ ಸಹಕರಿಸಿದ್ದಾರೆ.

ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 84/2026 ರಂತೆ NDPS ಕಾಯ್ದೆ 1985 ರ ಕಲಂ 8(c), 20(b)(II)(A) ಅಡಿ ಪ್ರಕರಣ ದಾಖಲಿಸಲಾಗಿದೆ.

ಸುಳ್ಯ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿ ಬಂಧನ – vishwanews24

ಬಂಧಿತ ಆರೋಪಿ ಅನಿಲ್‌ನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ, ಪಡುಬಿದ್ರಿ ಪಿಎಸ್‌ಐ ಸಕ್ತಿವೇಲು ಮತ್ತು ಅನಿಲ್ ಕುಮಾರ್ ಟಿ ನಾಯಕ್ ನೇತೃತ್ವದ  ತಂಡದಲ್ಲಿ ಎಎಸ್‌ಐ ಗಿರೀಶ್ ಯು.ಆರ್, ಹೆಚ್‌ಸಿ ಕೃಷ್ಣಪ್ರಸಾದ್, ಹೆಚ್‌ಸಿ ಮಿಥುನ್, ಪಿಸಿ ಸಂದೇಶ್ ಭಂಡಾರಿ, ಪಿಸಿ ರಾಘವೇಂದ್ರಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಂಗಡಿ, ಪಾನ್ ಸ್ಟಾಲ್ ಹೆಸರಿನಲ್ಲಿ ಮಾದಕ ವಸ್ತು ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಬಂಟ್ವಾಳ : ಬ್ಯಾಂಕ್ ಕಳ್ಳತನ ಪ್ರಕರಣ  ; ಪ್ರಮುಖ ಆರೋಪಿಯ ಬಂಧನ – vishwanews24

Leave a Reply