ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ನಾಲ್ಕನೇ ಪರ್ಯಾಯ ಉತ್ಸವಕ್ಕೆ ಸಜ್ಜಾದ ಶ್ರೀಕೃಷ್ಣನೂರು – vishwanews24

Featured, ಉಡುಪಿ

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ನಾಲ್ಕನೇ ಪರ್ಯಾಯ ಉತ್ಸವಕ್ಕೆ ಸಜ್ಜಾದ ಶ್ರೀಕೃಷ್ಣನೂರು

ಉಡುಪಿ: ಶ್ರೀಕೃಷ್ಣನೂರು ಉಡುಪಿಯು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ನಾಲ್ಕನೇ ಪರ್ಯಾಯ ಉತ್ಸವಕ್ಕೆ ಸಜ್ಜಾಗಿದೆ.

ಶ್ರೀಕೃಷ್ಣ ಮಠದ ರಥಿಬೀದಿ ಸುತ್ತ ಮುತ್ತಲಿನ ಪರಿಸರವಲ್ಲದೆ ನಗರದ ಬಹುತೇಕ ಪ್ರಮುಖ ಸ್ಥಳಗಳು ಹಾಗೂ ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳೆಲ್ಲ ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿವೆ. ಬುಧವಾರ ಮಧ್ಯರಾತ್ರಿಯ ಬಳಿಕ ಕಾಪುವಿನ ದಂಡತೀರ್ಥದಲ್ಲಿ ಮಿಂದು ಬರುವ ಶ್ರೀಗಳ ಸ್ವಾಗತಕ್ಕೆ ದಂಡತೀರ್ಥ ಮಠದಿಂದ ಉಡುಪಿ ವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ವಿದ್ಯುದ್ದೀಪಗಳ ಅಲಂಕಾರವನ್ನು ಅಳವಡಿಸಲಾಗಿದೆ. ಇದು ಈ ಬಾರಿಯ ವಿಶೇಷ.

ನಗರದ ವಿವಿಧೆಡೆ ಕೇಸರಿ ಬಾವುಟಗಳು ರಾರಾಜಿಸತೊಡಗಿವೆ. ಪರ್ಯಾಯ ಮೆರವಣಿಗೆ ನಡೆಯುವ ಜೋಡುಕಟ್ಟೆ ಯಿಂದ ರಥಬೀದಿವರೆಗೆ ವಿಶೇಷ ಅಲಂಕಾರಗಳು, ವಿವಿಧ ಸ್ವಾಗತ ಕಮಾನುಗಳನ್ನು ರಚಿಸಲಾಗಿದೆ. ಒಟ್ಟಿ ನಲ್ಲಿ ಇಡೀ ನಗರವೇ ಸಂಭ್ರಮವನ್ನು ಮೈದುಂಬಿಕೊಂಡಿದೆ.

ಉಡುಪಿ : ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗೇ ಹೋಗ್ತೀನಿ : ಲಕ್ಷ್ಮಿ ಹೆಬ್ಬಾಳ್ಕರ್ – vishwanews24

252ನೆಯ ಪರ್ಯಾಯ ಅವಧಿ ಯ ಶ್ರೀಕೃಷ್ಣನ ಪೂಜೆಗೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಣಿಯಾಗುತ್ತಿದ್ದಾರೆ. ಜ. 18 ರ ಬೆಳಗ್ಗೆ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್‌ ನಡೆಯಲಿದ್ದು, ಜ. 17ರ ಬುಧವಾರ ಬೆಳಗ್ಗೆಯಿಂದಲೇ ಭಕ್ತರು ತಂಡೋ ಪತಂಡವಾಗಿ ನಗರಕ್ಕೆ ಆಗಮಿಸುವರು. ಹಾಗಾಗಿ ಜ. 17ರಿಂದ ತೊಡಗಿ 18ರ ಬೆಳಗಿನ ಜಾವದವರೆಗೂ ಉಡುಪಿ ಎಚ್ಚೆತ್ತಿರಲಿದೆ.

ತಮ್ಮ ಪರ್ಯಾಯ ಪೂರ್ವ ಸಂಚಾರವನ್ನು ಮುಗಿಸಿ ಪರ್ಯಾಯ ಪೀಠ ವನ್ನೇ ರುವ ಶ್ರೀ ಸುಗುಣೇಂದ್ರ ತೀರ್ಥರು ಜ. 8 ರಂದು ಪುರ ಪ್ರವೇಶ ಮಾಡಿದರು. ಪೌರ ಸಮ್ಮಾನದ ಮೂಲಕ ಅವರನ್ನು ನಾಗರಿಕರು, ಶ್ರೀಕೃಷ್ಣ ಭಕ್ತರು ಬರ ಮಾಡಿ ಕೊಂಡಿ ದ್ದಾರೆ. ಈಗಾಗಲೇ ರಥಬೀದಿ, ಶ್ರೀಕೃಷ್ಣ ಮಠ, ಪರ್ಯಾಯ ಮಠಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ.

ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ – vishwanews24

Leave a Reply