ಫಾಜೀಲ್ ಅಂತಿಮ ಯಾತ್ರೆ : ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ದಫನಕ್ರೀಯೆ:vishwanews24
ಫಾಜೀಲ್ ಅಂತಿಮ ಯಾತ್ರೆ : ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ದಫನಕ್ರೀಯೆ
ಮಂಗಳೂರು: ಫಾಜೀಲ್ ನಿವಾಸದಲ್ಲಿ ಅಂತಿಮ ದರ್ಶನ ಮುಕ್ತಾಯಗೊಂಡು:ಮಂಗಳಪೇಟೆ ಮಸೀದಿಗೆ ಫಾಜೀಲ್ ಅಂತಿಮ ಯಾತ್ರೆ: ಭಾರಿ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ.
ಗುರುವಾರ ರಾತ್ರಿ ಸುರತ್ಕಲ್ ಭಾಗದಲ್ಲಿ ಮುಸ್ಲಿಂ ಯುವಕ ಫಾಜೀಲ್ ಅವರನ್ನು ದುಷ್ಕರ್ಮಿಗಳು ತಲವಾರು ಬೀಸಿ ಕೊಲೆ ಮಾಡಿದ್ದು ಸದ್ಯ ಫಾಜೀಲ್ ನಿವಾಸದಲ್ಲಿ ಅಂತಿಮ ದರ್ಶನ ಮುಕ್ತಾಯಗೊಂಡು ಮಂಗಳಪೇಟೆ ಮಸೀದಿಗೆ ಫಾಜೀಲ್ ಅವರ ಮೃತದೇಹವನ್ನು ಕೊಂಡೋಯ್ಯಲಾಗಿದ್ದು ಆ ಭಾಗದಲ್ಲಿ ಭಾರಿ ಜನಸ್ತೋಮ ಸೇರಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.ಈ ವಿಚಾರವಾಗಿ ಸುರತ್ಕಲ್ ಭಾಗದ ಜನ ಬೆಚ್ಚಿಬಿದ್ದಿದ್ದಾರೆ. ಮಂಗಳಪೇಟೆಯ ಮೊಯಿದ್ದೀನ್ ಜುಮ್ಮಾ ಮಸೀದಿಯಲ್ಲಿ ಅಂತಿಮ ದಫನಕ್ರೀಯೆ ನಡೆಯಲಿದೆ.
