ಫಾಜೀಲ್ ಯಾವುದೇ ಮತೀಯ ಸಂಘಟನೆಯಲ್ಲಿ ಸೇರಿಕೊಂಡ ವ್ಯಕ್ತಿ ಅಲ್ಲ: ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ:vishwanews24
ಫಾಜೀಲ್ ಯಾವುದೇ ಮತೀಯ ಸಂಘಟನೆಯಲ್ಲಿ ಸೇರಿಕೊಂಡ ವ್ಯಕ್ತಿ ಅಲ್ಲ: ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ :vishwanews24
ಮಂಗಳೂರು: ಗುರುವಾರ ರಾತ್ರಿ ಸುರತ್ಕಲ್ ಭಾಗದಲ್ಲಿ ಮುಸ್ಲಿಂ ಯುವಕ ಫಾಜೀಲ್ ಅವರನ್ನು ದುಷ್ಕರ್ಮಿಗಳು ತಲವಾರು ಬೀಸಿ ಕೊಲೆ ಮಾಡಿದ್ದು ಸದ್ಯ ಫಾಜೀಲ್ ನಿವಾಸದಲ್ಲಿ ಅಂತಿಮ ದರ್ಶನ ಮುಕ್ತಾಯಗೊಂಡು ಮಂಗಳಪೇಟೆ ಮಸೀದಿಗೆ ಫಾಜೀಲ್ ಅವರ ಮೃತದೇಹವನ್ನು ಕೊಂಡೋಯ್ಯಲಾಗಿದ್ದು ಆ ಭಾಗದಲ್ಲಿ ಭಾರಿ ಜನಸ್ತೋಮ ಸೇರಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿದ ಮಂಗಳೂರು ಕಮಿಷನರ್ ಫಾಜೀಲ್ ಎಂಬ ಯುವಕ ಯಾವುದೇ ರೀತಿಯ ಮತೀಯ ಅಥಾವ ರಾಜಕೀಯ ಸಂಘಟನೆಯಲ್ಲಿ ಸೇರಿಕೊಂಡಿಲ್ಲ ಎಂದು ಅವರು ಹೇಳಿದರು.
