ಬಿಜೆಪಿಯದ್ದು ಪೇಡ್ ಪಾದಯಾತ್ರೆ :ಬಿ.ಕೆ. ಹರಿಪ್ರಸಾದ್ ವಾಗ್ದಾಳಿ – vishwanews24

Featured, ರಾಜ್ಯ ನ್ಯೂಸ್

ಬಿಜೆಪಿಯದ್ದು ಪೇಡ್ ಪಾದಯಾತ್ರೆ :ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಕೇವಲ ‘ಪೇಡ್ ಪಾದಯಾತ್ರೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತೀವ್ರವಾಗಿ ಲೇವಡಿ ಮಾಡಿದ್ದಾರೆ.

ಮಂಗಳೂರು ಪ್ರವಾಸದ ವೇಳೆ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೇಗೆ ಪೇಡ್ ನ್ಯೂಸ್ ಬರುತ್ತದೋ, ಅದೇ ರೀತಿ ಬಿಜೆಪಿಯವರು ಮಾಡುತ್ತಿರುವುದು ಸಂಪೂರ್ಣವಾಗಿ ಪೇಡ್ ಪಾದಯಾತ್ರೆ. ಇದರಲ್ಲಿ ಜನಸಾಮಾನ್ಯರ ಯಾವುದೇ ಪಾಲ್ಗೊಳ್ಳುವಿಕೆ ಅಥವಾ ಮನ್ನಣೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬಗ್ಗೆ ಭಾರಿ ಗೊಂದಲವಿದೆ, ಹಲವು ನಾಯಕರೇ ಈ ಪಾದಯಾತ್ರೆಗೆ ಹೋಗಿಲ್ಲ. ಕೇವಲ ಮರಿ ಯಡಿಯೂರಪ್ಪನವರ (ಬಿ.ವೈ.ವಿಜಯೇಂದ್ರ) ನಾಯಕತ್ವವನ್ನು ಪುನಃಸ್ಥಾಪಿಸಲು ಮತ್ತು ನಿರುದ್ಯೋಗಿ ನಾಯಕರಿಗೆ ಕೆಲಸ ತೋರಿಸಲು ಈ ಪಾದಯಾತ್ರೆ ಮಾಡುತ್ತಿದ್ದಾರೆಯೇ ವಿನಃ ಜನರಿಗೋಸ್ಕರವಲ್ಲ. ಜನಸಾಮಾನ್ಯರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ಸದನದಲ್ಲಿ ಚರ್ಚೆ ಮಾಡಲು ಇವರಿಗೆ ಏನು ಅಡ್ಡಿಯಾಗಿತ್ತು? ಎಂದು ಪ್ರಶ್ನಿಸಿದರು.

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಭಾರಿ ಬೆಂಕಿ ಅವಘಡ : ರೈಲು ಬೋಗಿ ಸುಟ್ಟು ಕರಕಲು – vishwanews24

Leave a Reply