ಬಿಲ್ಲವರು ಜಾಸ್ತಿಯಿರುವ ಉಡುಪಿಯಲ್ಲಿ ಬಿಜೆಪಿಯ ವ್ಯಾಮೋಹ ಮಾತ್ರ ಬಂಟರ ಪಾಲಿಗೆ…!!
ಬಿಲ್ಲವರು ಜಾಸ್ತಿಯಿರುವ ಉಡುಪಿಯಲ್ಲಿ ಬಿಜೆಪಿಯ ವ್ಯಾಮೋಹ ಮಾತ್ರ ಬಂಟರ ಪಾಲಿಗೆ…!!
ವಿಶ್ವಕರ್ಮ-ಜಿಎಸ್ಬಿ-ಆರ್ ಎಸ್ಬಿ- ದೇವಾಡಿಗ ಸಮುದಾಯಕ್ಕೆ ಈ ಬಾರಿಯಾದರೂ ನೀಡುವರೆ ಮಣೆ..??
ಬಿಜೆಪಿ vs ಜಾತಿ
ಪೊಲಿಟಿಕಲ್ ವರದಿ : ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯು ಕೂಡ ಧರ್ಮ ರಾಜಕೀಯ ಬದಿಗೊತ್ತಿ ಜಾತಿ ಸಮೀಕರಣದ ರಾಜಕೀಯಕ್ಕೆ ಮುಂದಾಗಿ ಹಲವಾರು ವರ್ಷಗಳೆ ಕಳೆದು ಹೋಗಿದೆ ಅದರಲ್ಲೂ ವಿಶೇಷವಾಗಿ ಕರಾವಳಿಯ ಜನ ಧರ್ಮ ಪ್ರೀಯರರಂಬ ಕಾರಣಕ್ಕಾಗಿ ಒಟ್ಟಾರೆ ಜಾತಿ ಸಮೀಕರಣ ನಡೆಸುವುದು ಈ ಬಾರಿ ಪ್ರಥಮವಲ್ಲ ಪ್ರಬಲ ಜಾತಿಯನ್ನು ವಿಶ್ವಾಸಕ್ಕೆ ಪಡೆದು ತಲೆಮಾರುಗಳಿಂದ ಏಕಪಕ್ಷೀಯವಾಗಿ ಮತ ಚಲಾಯಿಸುತ್ತಿರುವ ವಿಶ್ವಕರ್ಮ, ದೇವಾಡಿಗ,ಜಿಎಸ್ಬಿ,ಆರ್ ಎಸ್ಬಿ ಸೇರಿದಂತೆ ಹತ್ತು ಹಲವಾರು ಜಾತಿಗಳಿಗೆ ಬರೀ ಬೆಲ್ಲ ಸವರುವ ಯತ್ನ ಮಾಡುತ್ತಿದೆ.
ಸರಿಯಾಗಿ ಜಾತಿ ಸಮೀಕರಣ ನಡೆಸಿ ಪ್ರಬಲ ಜಾತಿಗಳಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದರೂ ಅದೂ ನಂಬಲಸಾಧ್ಯವಾದ ಮಾತು ಏಕೆಂದರೆ ಉದಾಹರಣೆಗೆ ಉಡುಪಿ ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರದ ಪ್ರಕಾರ ಬಿಲ್ಲವ ಪ್ರಥಮ ಸ್ಥಾನ, ಬಂಟ ಮೊಗವೀರ ದ್ವೀತಿಯ ಸ್ಥಾನ ಅಲಂಕರಿಸಿಕೊಂಡಿದೆ ಆದರೆ ಯಾವುದೇ ಚುನಾವಣೆ ಬಂದರೂ ಕೂಡ ಅತೀ ಹೆಚ್ಚು ಸ್ಥಾನವನ್ನು ಬಂಟರಿಗೆ ನೀಡಿ ಅಳೆದುಳಿದಿರುವ ಕ್ಷೇತ್ರವನ್ನು ಉಳಿದ ಜಾತಿಗಳಿಗೆ ನೀಡುತ್ತಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕೂಡ ದಕ ದಲ್ಲಿ ತಲಾ ಒಂದು ಮತ್ತು ಉಡುಪಿಯಲ್ಲಿ ತಲಾ ಒಂದರಂತೆ ಟಿಕೆಟ್ ನೀಡಿತ್ತು ಈ ಬಾರಿ ಕೂಡ ಉಡುಪಿಯಲ್ಲಿ ಬಿಲ್ಲವರಿಗೆ ಮತ್ತು ಉಳಿದ ಜಾತಿಯವರಿಗೆ ಬಿಜೆಪಿ ಕೈ ಕೊಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಉಡುಪಿಯಲ್ಲಿ ಎರಡು ಸ್ಥಾನ ಬಂಟ ಸಮುದಾಯಕ್ಕೆ ,ಒಂದು ಒಂದರಂತೆ ಬಿಲ್ಲವ ಮೊಗವೀರ ಬ್ರಾಹ್ಮಣರಿಗೆ ನೀಡುವ ಮುಖೇನ ತಲೆಮಾರಿನ ಮತಗಳಿರುವ ಜಾತಿಯನ್ನು ಕೈ ಬಿಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎನ್ನುತ್ತಾರೆ ರಾಜಕೀಯ ತಜ್ಞರು.
ಇನ್ನೂ ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಐದು ವರ್ಷದಲ್ಲಿ ಬಂಟ ಸಮುದಾಯಕ್ಕೆ ಐದು ನಿಗಮ ಮಂಡಳಿ,ಬಿಲ್ಲವ ಸಮುದಾಯಕ್ಕೆ ಒಂದು ಎಂ.ಎಲ್ಸಿ ಸ್ಥಾನ ನೀಡಿತ್ತು ಆದರೇ ಸಣ್ಣ ಜಾತಿಗಳು (ಮತಗಳ ಲೆಕ್ಕಾಚಾರ) ಸಮುದಾಯಕ್ಕೆ ಯಾವುದೇ ಸ್ಥಾನಮಾನ ನೀಡದೆ ವಂಚಿಸುತ್ತಿದೆ ಎಂಬುದು ಒಂದೆಡೆಯ ವಾದವಾಗಿದೆ.
ಪ್ರಬಲ ವಿಶ್ವಕರ್ಮ,ಜಿಎಸ್ಬಿ,ಆರ್ ಎಸ್ಬಿ,ದೇವಾಡಿಗ,ಮರಾಠಿ ನಾಯ್ಕ್,ಶೇರಿಗಾರ ಸೇರಿದಂತೆ ಹತ್ತು ಹಲವಾರು ಸಮುದಾಯಗಳು ಬಿಜಪಿಯ ಜಾತಿ ಸಮೀಕರಣದ ಪ್ರಕಾರ ಪ್ರಬಲ ಹುದ್ದೆ ಅಲಂಕರಿಸುವಲ್ಲಿ ವಿಫಲವಾಗಿದೆ.
ಬಿಜೆಪಿಯ ಜಿಲ್ಲೆ ಕ್ಷೇತ್ರ ಕಮಿಟಿಯಲ್ಲೂ ಅನ್ಯಾಯ
ಇನ್ನೂ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವು ಜಾತಿಗಳಿಗೆ ಮತ ಕಡಿಮೆಯ ಲೆಕ್ಕಾಚಾರ ನೀಡಿದರೂ ಕ್ಷೇತ್ರ ಕಮಿಟಿಯಲ್ಲಿ ಕೂಡ ಜವಬ್ದಾರಿ ನೀಡುವಲ್ಲಿ ಬಿಜೆಪಿ ವಿಫಲತೆ ಕಂಡಿದೆ ಎಂಬ ಕೂಡ ವಾದವಿದೆ ಮತ ಪಡೆಯುವ ಸಮಯದಲ್ಲಿ ಕಡಿಮೆ ಸಂಖ್ಯಾ ಜಾತಿಯ ಬೆಂಬಲ ಬೇಕೆಂದು ಪಟ್ಟು ಹಿಡಿಯುವ ಬಿಜೆಪಿ ಜವಾಬ್ದಾರಿ ಹಾಗೂ ಸೀಟು ಹಂಚುವ ಸಮಯದಲ್ಲಿ ಕೂಡ ತನ್ನ ಜಾತಿ ಜವಬ್ದಾರಿ ಇನ್ನಾದರೂ ವಹಿಸುವ ಅಗತ್ಯವಿದೆ.
ವಿಶೇಷವಾಗಿ ಧರ್ಮ ರಾಜಕೀಯದ ಬಗ್ಗೆ ಮಾತಾಡುವ ಬಿಜೆಪಿಯು ಕೂಡ ಉಳಿದ ಪಕ್ಷಗಳಂತೆ ಜಾತಿಯ ಬಾಲ ಹಿಡಿದು ತಿರುಗುತ್ತಿರುವುದು ಕೂಡ ವಿಪರ್ಯಾಸ.
