ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು  – vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು ; ಮತ್ತಿಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ಇಬ್ಬರು ವಿದೇಶಿಗರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಲೆಕ್ಟ್ರಿಕ್ ಶಾಕ್​​ನಿಂದ ದುರ್ಘಟನೆ ನಡೆದಿದ್ದು, ಸ್ಲೋವಾಕಿಯಾ ಮೂಲದ ಓರಿಯಾಟ್ (45) ಮತ್ತು ಜರ್ಮನ್​​ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತ ದುರ್ದೈವಿಗಳಾಗಿದ್ದಾರೆ. ಈ ಸಂಬಂಧ ಮೃತ ಅಲೆಕ್ಸಾಂಡರ್ ಪತ್ನಿ ದೂರು ನೀಡಿದ್ದು, ಸ್ಥಳಕ್ಕೆ ಹಲಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು – vishwanews24

ರಕ್ಷಣೆಗೆ ಹೋದ ಇಬ್ಬರಿಗೆ ಗಂಭೀರ ಗಾಯ
ಕಾನ್ರಾಡ್ ಹೋಟೆಲ್‌ನ 3ನೇ ಮಹಡಿಯಲ್ಲಿರುವ ಸ್ವಿಮ್ಮಿಂಗ್ ಪೂಲ್​​ನಲ್ಲಿ ಘಟನೆ ನಡೆದಿದೆ. ಸ್ಲೋವೋಕಿಯಾ ಮತ್ತು ಜರ್ಮನ್ ಮೂಲದ ಇಬ್ಬರು ಕಳೆದ ಕೆಲ ದಿನಗಳಿಂದ ಹೋಟೆಲ್​​ನಲ್ಲಿ ತಂಗಿದ್ದರು. ಘಟನೆ ವೇಳೆ ಇಬ್ಬರನ್ನು ರಕ್ಷಿಸಲು ಅಮೆರಿಕ ಮೂಲದ ವ್ಯಕ್ತಿ ಮತ್ತು ಪೂಲ್​​ ಅಟೆಂಡರ್​​ ಯತ್ನಿಸಿದ್ದು, ಅವರಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೋಟೆಲ್​​ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ – vishwanews24

Leave a Reply