ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ : ಪರಮೇಶ್ವರ್ – vishwanews24
ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ : ಪರಮೇಶ್ವರ್
ಬೆಂಗಳೂರು: ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಡಿಸಿಎಂ ಪರಮೇಶ್ವರ್ ಬೆಲೆ ಏರಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿಸಿಎಂ ಪರಮೇಶ್ವರ್ ಮಾತನಾಡಿ, ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ಕೆಲವು ಅನಿವಾರ್ಯತೆ ಇದೆ. ಕೇಂದ್ರ ನಮಗೆ ಕೊಡಬೇಕಾದ ಹಣ ಕೊಟ್ಟರೆ ನಮಗೆ ಹೊರೆ ಆಗಲ್ಲ. ಕೇಂದ್ರ ನಮ್ಮ ಹಣ ಕೊಟ್ಟರೆ ಆಗ ನಾವು ರೇಟ್ ಜಾಸ್ತಿ ಮಾಡಲ್ಲ. ಈಗ ನಮಗೆ ಅನಿವಾರ್ಯತೆ ಎಂದಿದ್ದಾರೆ.
ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅದರ ಇಂಪ್ಯಾಕ್ಟ್ ಆಗಿದೆ. ಹೀಗಾಗಿ ನಾವು ರೈತರ ಪರ ನಿಲ್ಲಬೇಕು ಅಲ್ಲವಾ? ಬರ ಏರಿಕೆ ಸಮರ್ಥನೆ ಮಾಡಿಕೊಳ್ಳಲ್ಲ. ಆದರೆ ಕೇಂದ್ರ ನಮಗೆ ಸಹಕಾರ ಕೊಟ್ಟರೆ ನಾವು ಏರಿಕೆ ಮಾಡಲ್ಲ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.
