ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಭಾರೀ ವಾಹನಗಳ ಅತಿವೇಗದ ಸಂಚಾರ ; ವಾಹನ ಸವಾರರು, ಪಾದಚಾರಿಗಳಲ್ಲಿ ಆತಂಕ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಭಾರೀ ವಾಹನಗಳ ಅತಿವೇಗದ ಸಂಚಾರ ; ವಾಹನ ಸವಾರರು, ಪಾದಚಾರಿಗಳಲ್ಲಿ ಆತಂಕ

ಮಂಗಳೂರು: ನಗರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಲಾರಿ, ಟ್ಯಾಂಕರ್ ಹಾಗೂ ಕಂಟೇನರ್ ಗಳ ಅತಿವೇಗದ ಸಂಚಾರಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ತಿರುವು-ಮುರುವು ಹಾಗೂ ಏರುಪೇರುಗಳಿಂದ ಕೂಡಿದ ರಸ್ತೆಗಳಲ್ಲೂ ಭಾರೀ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಇತರ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮೂಡಿಸಿದೆ.

ಬಂದರು, ಕೈಗಾರಿಕಾ ಹಾಗೂ ವಾಣಿಜ್ಯ ಚಟುವಟಿಕೆಗಳ ಕಾರಣ ನಗರದಲ್ಲಿ ರಾತ್ರಿ ವೇಳೆಯೂ ಸರಕು ಸಾಗಣೆ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಆದರೆ ರಾತ್ರಿ ವೇಳೆ ವಾಹನಗಳ ಸಂಖ್ಯೆ ಕಡಿಮೆಯಾಗುವುದನ್ನೇ ನೆಪವಾಗಿಸಿಕೊಂಡು ಕೆಲವು ಚಾಲಕರು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿರುವ ಆರೋಪ ಕೇಳಿಬಂದಿದೆ. ಇನ್ನು ಖಾಸಗಿ ಬಸ್ಗಳ ವೇಗದ ಪೈಪೋಟಿಯೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಬೆಳ್ತಂಗಡಿ : ದ್ವಿಚಕ್ರ ವಾಹನಗಳ ಮಧ್ಯೆ ಸರಣಿ ಅಪಘಾತ ; ಇಬ್ಬರು ಯುವಕರು ಸಾವು – vishwanews24

 

ಒಂದು ಬಸ್ಸನ್ನು ಮತ್ತೊಂದು ಬಸ್ ಹಿಂದಿಕ್ಕುವ ಭರದಲ್ಲಿ ಅತಿವೇಗವಾಗಿ ಸಂಚರಿಸುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಲಘು ವಾಹನಗಳ ಚಾಲಕರು ಜೀವಭಯದಲ್ಲೇ ಪ್ರಯಾಣಿಸುವಂತಾಗಿದೆ. ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಪೊಲೀಸ್ ಹಾಗೂ ಆರ್ಟಿಒ ತಪಾಸಣೆ ಹೆಚ್ಚಿಸಬೇಕು. ಅತಿವೇಗ, ಓವರ್ಲೋಡ್ ಮತ್ತು ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಹೆದ್ದಾರಿ ಗಸ್ತು ಪೊಲೀಸರು ವಾಹನಗಳ ಮೇಲೆ ನಿಗಾ ಇರಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.

ಯಾರೂ ಗಾಬರಿ ಪಡಬೇಕಿಲ್ಲ, ರೈತರ ಖಾತೆಗೆ ಹಣ ಹಾಕ್ತೀವಿ: ಸಿಎಂ ಸ್ಪಷ್ಟನೆ – vishwanews24

Leave a Reply