ಬೆಳ್ತಂಗಡಿ: ನದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ನದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಬೆಳ್ತಂಗಡಿ: ನದಿಯ ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳ್ತಂಗಡಿಯಲ್ಲಿ ಜ.10 ರಂದು ಸಂಜೆ ವರದಿಯಾಗಿದೆ.

ಲಾಯಿಲ ಗ್ರಾಮದ ಅಯೋಧ್ಯನಗರದ ನಿವಾಸಿ ಕಿರಣ್ ಗಾಣಿಗ(27) ಮೃತ ಯುವಕ ಎಂದು ತಿಳಿದುಬಂದಿದೆ. ಈತನ ಮೃತದೇಹ ಅಲ್ಲೇ ಸಮೀಪದಲ್ಲಿ ಹರಿಯುವ ನದಿಯ ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೆಳ್ತಂಗಡಿ: ನದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ - Prathidina

ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಕಿರಣ್ ಸಾವಿಗೆ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಲ್ಕಿ : ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ – Vishwanews24

Leave a Reply