ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ -vishwanews24

Featured, ಉಡುಪಿ

ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ ಎಂಬಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲೆ ಆರೋಪಿ ಬೈಕಾಡಿಯ ಪ್ರಮೋದ್ ಪೂಜಾರಿಯ ಸಹೋದರ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಪ್ರಮೋದ್ ಪೂಜಾರಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರದೀಪ್ ಪೂಜಾರಿ ರಿಕ್ಷಾ ಚಾಲಕ ಹಾಗೂ ಪ್ರಮೋದ್ ಪೂಜಾರಿ ಗಾರೆ ಕೆಲಸಗಾರ ಎಂದು ತಿಳಿದುಬಂದಿದೆ.

ಉಡುಪಿ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಬೈಕಾಡಿಗೆ ಶಿಫ್ಟ್ ಆಗಿದ್ದನು. ಅಲ್ಲಿ ಒಂದೇ ತಂಡವಾಗಿದ್ದ ಇವರೆಲ್ಲ ಕುಡಿದು ಪರಸ್ಪರ ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಲವು ದಿನಗಳಿಂದ ಸುಜಿತ್ ಪಿಂಟೊ ಸಹೋದರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಚಿತ್ರಹಿಂಸೆ ನೀಡುತ್ತಿದ್ದ ಎಂದು ದೂರಲಾಗಿದೆ

ಇದೆ ದ್ವೇಷದಿಂದ ಬೈಕಾಡಿಯ ಸರ್ಕಲ್ ಬಳಿ‌ ರಾತ್ರಿ ಬರಲು ಹೇಳಿದ್ದರು. ಅದರಂತೆ ಸಹೋದರರಿಬ್ಬರು ಮತ್ತು ಸುಜಿತ್ ಪಿಂಟೋ ಹಾಗೂ ಆತನ ಗೆಳೆಯ ಅಲ್ಲಿ ಬಂದರು. ಇವರ ಮಧ್ಯೆ ಮಾತಿಗೆ ಮಾತು ಬೆಳೆದು ಪ್ರಮೋದ್ ಪೂಜಾರಿ ಕಬ್ಬಿಣದ ರಾಡ್ ನಿಂದ ಸುಜಿತ್ ಪಿಂಟೊ ತಲೆಗೆ ಹೊಡೆದು ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ.

ಈ ಘಟನೆ ಬಳಿಕ ಪ್ರಮೋದ್ ಪೂಜಾರಿಯನ್ನು ಕೂಡಲೇ ಪೊಲೀಸರು ಬಂಧಿಸಿದ್ದು, ಬಳಿಕ ಶೋಧಕಾರ್ಯ ನಡೆಸಿ ಪರಾರಿಯಾಗಿದ್ದ ಪ್ರದೀಪ್ ಪೂಜಾರಿಯನ್ನು ಕೂಡ ಬಂಧಿಸಿದರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply